ಬೆಂಗಳೂರು [ಜು.26]: ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಂಡಿದ್ದು, ಬಿಜೆಪಿಗರು ಸರ್ಕಾರ ರಚನೆ ಸಂಭ್ರಮದಲ್ಲಿದ್ದಾರೆ. 

ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದು, ಇದೇ ವೇಳೆ ಮತ್ತೆ  ತಮ್ಮ ಅದೃಷ್ಟದ ಮನೆಗೆ ತೆರಳಲಿದ್ದಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. 

ಮೇ.30.2008ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ತಮ್ಮ ಅದೃಷ್ಟದ ನಿವಾಸ ಎಂದೇ ಪರಿಗಣಿಸುವ ರೇಸ್ ಕೋರ್ಸ್ ರಸ್ತೆಯ , ರೇಸ್ ಕೋರ್ಸ್ ವ್ಯೂ ಕಾಟೇಜ್ ನಂ.2 ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. 

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮತ್ತೆ ಸರ್ಕಾರ ರಚನೆಯ ಅವಕಾಶ?

ಕಳೆದ ಸರ್ಕಾರದ ಅವಧಿಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ವೇಳೆ ಇದೇ ಮನೆಯನ್ನು ತಮಗೆ ನೀಡುವಂತೆ ಯಡಿಯೂರಪ್ಪ ಕೇಳಿಕೊಂಡಿದ್ದರು. ಆದರೆ ಅವರಿಗೆ ನಿವಾಸ ನೀಡಿರಲಿಲ್ಲ

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಸಾ.ರಾ.ಮಹೇಶ್ ಅವರಿಗೆ ನೀಡಲಾಗಿತ್ತು. ಇದೀಗ BSY ತಮ್ಮ ಅದೃಷ್ಟದ ಮನೆ ಎಂದೇ ಪರಿಗಣಿಸುವ ಮನೆಗೆ ಮತ್ತೆ ಹೋಗ್ತಾರಾ ಎನ್ನುವುದು ಸದ್ಯದ ಕುತೂಹಲವಾಗಿದೆ.