Asianet Suvarna News Asianet Suvarna News

ಕೊನೆಯ ಭಯೋತ್ಪಾದಕನೂ ಸತ್ತಾಗಲೇ ‘ಉರಿ’ ಕಡಿಮೆಯಾದೀತು: ಹುತಾತ್ಮ ಗಂಗಾಧರ್ ಕುಟುಂಬ!

ಇಂದು ಉರಿ ಸೇನಾ ನೆಲೆ ಮೇಲೆ ಭಯೋತ್ಪಾದಕ ದಾಳಿ ನಡೆದು ಬರೋಬ್ಬರಿ ಒಂದು ವರ್ಷ ಭರ್ತಿಯಾಗಿದೆ. ಉಗ್ರರ ಹೀನ ಕೃತ್ಯದಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ವೀರ ಯೋಧರನ್ನು ಇಡೀ ದೇಶ ಸ್ಮರಿಸುತ್ತಿದೆ. ಅದರಂತೆ ಉರಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಪ.ಬಂಗಾಳದ ಹೌರಾದ ವೀರ ಸೈನಿಕ ಗಂಗಾಧರ್ ಧುಲೋಯಿ ಅವರ ಕುಟುಂಬ ವರ್ಗವನ್ನು ಏಶೀಯಾನೆಟ್ ಸುದ್ದಿಸಂಸ್ಥೆ ಭೇಟಿ ಮಾಡಿ ಮಾತುಕತೆ ನಡೆಸಿದೆ.

ನವದೆಹಲಿ(ಸೆ.18): ಇಂದು ಉರಿ ಸೇನಾ ನೆಲೆ ಮೇಲೆ ಭಯೋತ್ಪಾದಕ ದಾಳಿ ನಡೆದು ಬರೋಬ್ಬರಿ ಒಂದು ವರ್ಷ ಭರ್ತಿಯಾಗಿದೆ. ಉಗ್ರರ ಹೀನ ಕೃತ್ಯದಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ವೀರ ಯೋಧರನ್ನು ಇಡೀ ದೇಶ ಸ್ಮರಿಸುತ್ತಿದೆ. ಅದರಂತೆ ಉರಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಪ.ಬಂಗಾಳದ ಹೌರಾದ ವೀರ ಸೈನಿಕ ಗಂಗಾಧರ್ ಧುಲೋಯಿ ಅವರ ಕುಟುಂಬ ವರ್ಗವನ್ನು ಏಶೀಯಾನೆಟ್ ಸುದ್ದಿಸಂಸ್ಥೆ ಭೇಟಿ ಮಾಡಿ ಮಾತುಕತೆ ನಡೆಸಿದೆ. ಉರಿ ದಾಳಿಯ ವೇಳೆ ತಮ್ಮ ಸೇನಾ ಕ್ಯಾಂಪ್‌ನಲ್ಲಿ ಚಹಾ ಹೀರುತ್ತಿದ್ದ 22 ವರ್ಷದ ಗಂಗಾಧರ್ ಧುಲೋಯಿ, ಗುಂಡಿನ ಶಬ್ಧ ಕೇಳಿ ತಮ್ಮ ಬಂದೂಕಿನೊಂದಿಗೆ ಹೊರ ಬಂದಿದ್ದರು. ಉಗ್ರ ದಾಳಿಯ ಕುರಿತು ಮಾಹಿತಿ ಪಡೆದ ಗಂಗಾಧರ್ ವೀರಾವೇಶದಿಂದ ಭಯೋತ್ಪಾದಕರೊಂದಿಗೆ ಹೋರಾಡುತ್ತಾ ಕೊನೆಯಲ್ಲಿ ಗುಂಡೇಟು ತಗುಲು ವೀರ ಮರಣವನ್ನಪ್ಪಿದರು. ಉತ್ತಮ ಓಟಗಾರರಾಗಿದ್ದ ಗಂಗಾಧರ್ ಸೇನೆಗೆ ಸೇರಿರದಿದ್ದರೆ ಅಥ್ಲೆಟಿಕ್‌ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದ ಅಂತಾರೆ ಅವರ ತಂದೆ ಓಂಕಾರ್‌ನಾಥ್ ಧುಲೋಯಿ, ಅದರಂತೆ ದೇಶಕ್ಕಾಗಿ ಮಗ ತನ್ನ ಪ್ರಾಣವನ್ನೇ ಅರ್ಪಿಸಿರುವುದು ತಮಗೆ ಹೆಮ್ಮೆ ತರುವ ಸಂಗತಿ ಅಂತಾರೆ  ಗಂಗಾಧರ್ ತಾಯಿ ಸಿಖಾ ಧುಲೋಯಿ. ಏಶಿಯಾನೆಟ್ ಸಂಸ್ಥೆ ಹುತಾತ್ಮ ಗಂಗಾಧರ್ ಕುಟುಂಬ ವರ್ಗದವರೊಂದಿಗೆ ನಡೆಸಿದ ಸಂವಾದದ ಪೂರ್ಣ ವಿಡಿಯೋ ನಿಮಗಾಗಿ..