Asianet Suvarna News Asianet Suvarna News

‘ಸರ್ಕಾರ ಉಳಿಸಲು ಏನಾದ್ರೂ ಮಾಡು’ ಡಿಕೆಶಿ ನಿವಾಸಕ್ಕೆ ಡಿಸಿಎಂ ದೌಡು!

Jul 1, 2019, 5:58 PM IST

ಬೆಂಗಳೂರು (ಜು.01): ಶಾಸಕ ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್ ನಾಯಕರಿಗೆ ತಳಮಳ ಶುರುವಾಗಿದೆ. ಆನಂದ್ ಸಿಂಗ್ ಕೊಟ್ಟ ಅನಿರೀಕ್ಷಿತ ಹೊಡೆತ, ಕೈ ನಾಯಕರಿಗೆ ಆಘಾತ ನೀಡಿದೆ. ಅತ್ತ ಸಿಎಂ ಕುಮಾರಸ್ವಾಮಿ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಇತ್ತ ಸರ್ಕಾರ ಉಳಿಸಲು ಡಿಸಿಎಂ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಆನಂದ್ ಸಿಂಗ್ ರಾಜೀನಾಮೆ ಮತ್ತು ಮುಂದಿನ ನಡೆಯನ್ನು ಚರ್ಚಿಸಲು, ಡಾ. ಜಿ. ಪರಮೇಶ್ವರ್, ಪಕ್ಷ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ದೌಡಾಯಿಸಿದ್ದಾರೆ.