Asianet Suvarna News Asianet Suvarna News

ಜಗತ್ತು ಸರ್ವನಾಶಕ್ಕೆ ಟೈಂ ಫಿಕ್ಸ್‌ ..!

ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು, ರಕ್ತ ಹೆಪ್ಪುಗಟ್ಟಿಸುವ ಚಳಿ, ಆಗಾಗ ಕಂಪಿಸುವ ಭೂಮಿ ಈ ಎಲ್ಲವೂ ಜಗತ್ತು ಸರ್ವನಾಶಕ್ಕೆ ಸಮಯ ನಿಗದಿಯಾಗಿದೆಯೇ ಎಂಬ ಅನುಮಾನ ಮೂಡಿಸುತ್ತಿದೆ. 

ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು, ರಕ್ತ ಹೆಪ್ಪುಗಟ್ಟಿಸುವ ಚಳಿ, ಆಗಾಗ ಕಂಪಿಸುವ ಭೂಮಿ ಈ ಎಲ್ಲವೂ ಜಗತ್ತು ಸರ್ವನಾಶಕ್ಕೆ ಸಮಯ ನಿಗದಿಯಾಗಿದೆಯೇ ಎಂಬ ಅನುಮಾನ ಮೂಡಿಸುತ್ತಿದೆ. ಪ್ರತಿಯೊಬ್ಬರಿಗೂ ಇತ್ತೀಚೆಗೆ ಸಾವಿನ ಭಯ ಕಾಡುತ್ತಿದೆ. ಇದಕ್ಕೆ ಸರಿಯಾಗಿ ಡೂಮ್ಸ್‌ ಡೇ ಎಂಬ ಗಡಿಯಾರವೂ ಸರ್ವನಾಶದ ಸೂಚನೆ ನೀಡುತ್ತಿದೆ. Doomsday Clock ಡೂಮ್ಸ್‌ಡೇ ಕ್ಲಾಕ್ ಮುಳ್ಳನ್ನು ಸರ್ವನಾಶದ ಮುಳ್ಳು ಎಂದೇ ಭಾವಿಸಲಾಗುತ್ತಿದೆ. ಒಂದು ವೇಳೆ ಈ ಮುಳ್ಳು ಮಧ್ಯರಾತ್ರಿ 12 ಗಂಟೆಗೆ ಸರಿದರೆ ಅರ್ಥಾತ್ ಈ ಗಡಿಯಾರ 12 ಗಂಟೆಯನ್ನು ಸೂಚಿಸಿದರೆ ಜಗತ್ತು ಸರ್ವನಾಶವಾಗುತ್ತದೆ ಎಂಬ ನಂಬಿಕೆ ಇದೆ. ಜಗತ್ತು ಎಷ್ಟು ಅಪಾಯದಲ್ಲಿದೆ ಎಂಬುದನ್ನು ಸಾಂಕೇತಿಕವಾಗಿ ತೋರಿಸಲು 1947ರಲ್ಲಿ ಡೂಮ್ಸ್‌ಡೇ ಕ್ಲಾಕ್​​ನ್ನು ವಿಜ್ಞಾನಿಗಳು ಸೃಷ್ಟಿಸಿದ್ದರು.