Asianet Suvarna News Asianet Suvarna News

Comedian Dwarakish in Trouble: ಸಾಲ ಪಡೆದಿದ್ದ 50 ಲಕ್ಷ ರೂ ವಾಪಸ್ ಕೊಡುವಂತೆ ಕೋರ್ಟ್ ಆದೇಶ

 ಸ್ಯಾಂಡಲ್‌ವುಡ್ (Sandalwood) ಹಿರಿಯ ನಟ ದ್ವಾರಕೀಶ್ (Dwarakish) ಅವರು 2103 ರಲ್ಲಿ KCN ಚಂದ್ರಶೇಖರ್ ಎಂಬುವವರ ಬಳಿ 50 ಲಕ್ಷ ಸಾಲ ಪಡೆದು ವಾಪಸ್ ನೀಡದೇ ಸತಾಯಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸಾಲ ಕೊಟ್ಟವರ ವಿರುದ್ಧ ಕೊಲೆಯತ್ನ ಕೇಸನ್ನೂ ಹಾಕಿದ್ದರು. 
 

First Published Dec 12, 2021, 11:05 AM IST | Last Updated Dec 12, 2021, 11:28 AM IST

ಬೆಂಗಳೂರು (ಡಿ. 12): ಸ್ಯಾಂಡಲ್‌ವುಡ್ (Sandalwood) ಹಿರಿಯ ನಟ ದ್ವಾರಕೀಶ್ (Dwarakish) ಅವರು 2103 ರಲ್ಲಿ KCN ಚಂದ್ರಶೇಖರ್ ಎಂಬುವವರ ಬಳಿ 50 ಲಕ್ಷ ಸಾಲ ಪಡೆದು ವಾಪಸ್ ನೀಡದೇ ಸತಾಯಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸಾಲ ಕೊಟ್ಟವರ ವಿರುದ್ಧ ಕೊಲೆಯತ್ನ ಕೇಸನ್ನೂ ಹಾಕಿದ್ದರು. 

Puneeth Rajkumar Museum: ಗಾಜನೂರು ಮನೆಯನ್ನು ಮ್ಯೂಸಿಯಂ ಮಾಡಲು ಕುಟುಂಬದ ಚಿಂತನೆ.?

'ಹಣ ಪಡೆಯುವಾಗ ದ್ವಾರಕೀಶ್ ಚೆಕ್ ನೀಡಿದ್ದರು. ಆದರೆ ಚೆಕ್ ನೀಡಿಲ್ಲ, ಸಹಿ ನನ್ನದಲ್ಲ ಎಂದು ದ್ವಾರಕೀಶ್ ಕೋರ್ಟ್‌ನಲ್ಲಿ ವಾದ ಮಾಡಿದ್ದರು. ಪೊರಾನ್ಸಿಕ್ ಲ್ಯಾಬ್‌ನಲ್ಲಿ ದ್ವಾರಕೀಶ್ ಸಹಿಯೆಂದು ಸಾಬೀತಾಗಿದೆ. 2019 ರಲ್ಲಿ ಸ್ಮಾಲ್ ಕಾಸಸ್ ಕೋರ್ಟ್ 52 ಲಕ್ಷ ನೀಡಲು ಆದೇಶಿಸಿದೆ. ಕೆಳನ್ಯಾಯಾಯದ ಆದೇಶವನ್ನು ಸೆಷನ್ಸ್ ಕೋರ್ಟ್ ಎತ್ತಿ ಹಿಡಿದಿದೆ.