Raichur: ರೈತನ ಬಾಳು ಕಸಿದುಕೊಂಡ ಬಿಳಿ ಬಣ್ಣದ ಮೆಣಸಿನಕಾಯಿ ಬೆಳೆ

ಜಿಲ್ಲೆಯ ದೇವದುರ್ಗ ತಾಲೂಕಿನ ನೂರಾರು ರೈತರು ಮೆಣಸಿನಕಾಯಿ ಬೆಳೆದು ಕಂಗಾಲಾಗಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಈಗ ಕೆಂಪು ಬಣ್ಣದಲ್ಲಿ ಬರಬೇಕಾದ ಮೆಣಸಿನಕಾಯಿ ಬಿಳಿಬಣ್ಣದಲ್ಲಿ ಬಂದಿವೆ. 

First Published Feb 3, 2022, 10:16 AM IST | Last Updated Feb 3, 2022, 12:28 PM IST

ರಾಯಚೂರು (ಫೆ.03): ಜಿಲ್ಲೆಯ ದೇವದುರ್ಗ ತಾಲೂಕಿನ ನೂರಾರು ರೈತರು ಮೆಣಸಿನಕಾಯಿ ಬೆಳೆದು ಕಂಗಾಲಾಗಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಈಗ ಕೆಂಪು ಬಣ್ಣದಲ್ಲಿ ಬರಬೇಕಾದ ಮೆಣಸಿನಕಾಯಿ ಬಿಳಿಬಣ್ಣದಲ್ಲಿ ಬಂದಿವೆ. ಮೆಣಸಿನಕಾಯಿಯೂ ಕಾರವೂ ಇಲ್ಲ, ಕೆಂಪು ಬಣ್ಣವೂ ಇಲ್ಲದೆ ರೈತರು ಬೆಳೆದ ಮೆಣಸಿನಕಾಯಿಗೆ ಕೇಳುವರೇ ಇಲ್ಲದಂತೆ ಆಗಿದೆ. ಹೀಗಾಗಿ ಕೆಲ ರೈತರು 8 ತಿಂಗಳ ಕಾಲ ಎಕರೆ 80-90 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆದ ಮೆಣಸಿಕಾಯಿ ಬೆಳೆಯನ್ನ ಟ್ರ್ಯಾಕ್ಟರ್ ಮುಖಾಂತರ ನಾಶ ಮಾಡಲು ಮುಂದಾಗಿದ್ದಾರೆ. 

Corona Song ಕಾಣದ ಕ್ರಿಮಿಗೆ ಹೆದರಿದ ಜನ...ಎಂದು ಹಾಡು ರಚಿಸಿ ಹಾಡಿದ ರಾಯಚೂರು ಜಡ್ಜ್

ಇನ್ನೂ ಕೆಲ ರೈತರು ಬೆಳೆದ ಮೆಣಸಿಕಾಯಿ ಕಡಿದು ರಾಶಿ ಹಾಕಿ ಬಿಳಿ ಮತ್ತು ಕೆಂಪು ಬಣ್ಣ ಮೆಣಸಿಕಾಯಿ ಬೇಪರ್ಡಿಸಿವ ಕಾರ್ಯ ನಡೆಸಿದ್ದಾರೆ. ಕೆಂಪು ಮೆಣಸಿನಕಾಯಿಗೆ  ಕ್ವಿಂಟಾಲ್‌ಗೆ ಮಾರುಕಟ್ಟೆಯಲ್ಲಿ 15 -16 ಸಾವಿರ ರೂಪಾಯಿ ಇದೆ. ಆದ್ರೆ ಬಿಸಿ ಮೆಣಸಿಕಾಯಿಗೆ 2 ಸಾವಿರಕ್ಕೂ ಯಾರು ಕೇಳುತ್ತಿಲ್ಲ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ. ಈ ಕುರಿತು ರೈತರ ಜಮೀನಿನಿಂದ ನಮ್ಮ ರಾಯಚೂರು ರಿಪೋರ್ಟರ್ ಜಗನ್ನಾಥ ಪೂಜಾರ್ ರೈತರೊಂದಿಗೆ ಚಿಟ್‌ಚಾಟ್ ನಡೆಸಿದ್ದಾರೆ ನೋಡೋಣ ಬನ್ನಿ..