ಕಾರವಾರದಲ್ಲಿ ಜೋರಾಯ್ತು ಕ್ವಾರಂಟೈನ್ ಕಿರಿಕ್..!
ಕಾರವಾರ ನಗರದ ಕೆಇಬಿ ಕಾಲೋನಿಯಲ್ಲಿ ಐವರಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಇವರನ್ನು ಕರೆದೊಯ್ಯಲು ಆರೋಗ್ಯ ಸಿಬ್ಬಂದಿ ಬಂದಾಗ ಸಾಕಷ್ಟು ಮಾತಿನ ಚಕಮಕಿ ನಡೆದಿದೆ. ಕ್ವಾರಂಟೈನ್ ಸೆಂಟರ್‌ನಲ್ಲಿ ಅವ್ಯವಸ್ಥೆ ಇದ್ದಿದ್ದರಿಂದ ಸೋಂಕಿತರು ನಿರಾಕರಿಸಿದ್ದಾರೆ.
ಕಾರವಾರ(ಜು.27): ಅವ್ಯವಸ್ಥೆಗಳನ್ನು ಸರಿಪಡಿಸಿ, ಆಮೇಲೆ ಕ್ವಾರಂಟೈನ್ ಸೆಂಟರ್‌ಗೆ ಬರ್ತೀವಿ ಎಂದು ಅಧಿಕಾರಿಗಳಿಗೆ ಆಗ್ರಹಿಸಿದ ಘಟನೆ ಕಾರವಾರದಲ್ಲಿ ನಡೆದಿದೆ. ಈ ಕುರಿತಂತೆ ಸ್ಥಳೀಯರು ಹಾಗೂ ಪೊಲೀಸರ ನಡುವೆ ಕಚ್ಚಾಟಕ್ಕೂ ಸಾಕ್ಷಿಯಾಗಿದೆ.
ಕಾರವಾರ ನಗರದ ಕೆಇಬಿ ಕಾಲೋನಿಯಲ್ಲಿ ಐವರಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಇವರನ್ನು ಕರೆದೊಯ್ಯಲು ಆರೋಗ್ಯ ಸಿಬ್ಬಂದಿ ಬಂದಾಗ ಸಾಕಷ್ಟು ಮಾತಿನ ಚಕಮಕಿ ನಡೆದಿದೆ. ಕ್ವಾರಂಟೈನ್ ಸೆಂಟರ್‌ನಲ್ಲಿ ಅವ್ಯವಸ್ಥೆ ಇದ್ದಿದ್ದರಿಂದ ಸೋಂಕಿತರು ನಿರಾಕರಿಸಿದ್ದಾರೆ.
ಅವಳಿ ಮಕ್ಕಳ ಜೊತೆ ತಾಯಿ ನರಕ ಯಾತನೆ; ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು
ಸಿಬ್ಬಂದಿಗಳ ಜತೆ ಸೋಂಕಿತರು ಗಲಾಟೆ ನಡೆಸಿದ್ದರಿಂದ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಸಾಕಷ್ಟು ಮಾತಿನ ಚಕಮಕಿ ಬಳಿಕ ಸೋಂಕಿತರನ್ನು ಪೊಲೀಸರು ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ. ಈ ಕುರಿತಾಧ ಒಂದು ರಿಪೋರ್ಟ್ ಇಲ್ಲಿದೆ ನೋಡಿ.