ವಿವೇಕಾನಂದ ಜಯಂತಿಯಲ್ಲಿ ಬಸಣ್ಣಿ ಬಾ ಸಾಂಗ್‌ಗೆ ಕುಣಿದು ಕುಪ್ಪಳಿಸಿದ ಯುವಜನತೆ

ವಿವೇಕಾನಂದರ ಜಯಂತ್ಯೋತ್ಸವದಲ್ಲಿ ಸಿನೆಮಾ ಹಾಡಿಗೆ ಡ್ಯಾನ್ಸ್‌ ಮಾಡಿದ ಯುವಜನತೆ| ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದ ವಿವೇಕಾನಂದ ಜಯಂತಿ| ವಿವೇಕಾನಂದ ಜಯಂತಿಯಲ್ಲಿ ಸಿನಿಮಾ ಹಾಡಿಗೆ ಡ್ಯಾನ್ಸ್‌ ಮಾಡಿದ್ದಕ್ಕೆ ಪ್ರಜ್ಞಾವಂತರು ಅಸಮಾಧಾನ| 

First Published Feb 2, 2020, 2:23 PM IST | Last Updated Feb 2, 2020, 2:23 PM IST

ವಿಜಯಪುರ(ಫೆ.02): ಸ್ವಾಮಿ ವಿವೇಕಾನಂದರ 157 ನೇ ಜಯಂತ್ಯೋತ್ಸವದಲ್ಲಿ ಸಿನೆಮಾ ಹಾಡಿಗೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದಿದೆ. ಕರ್ನಾಟಕ ಯುವ ಸಂಘಗಳ ಒಕ್ಕೂಟ ನೇತೃತ್ವದಲ್ಲಿ ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. 

ಕಾರ್ಯಕ್ರಮದಲ್ಲಿ ಬಸಣ್ಣಿ ಬಾ ಎಂಬ ಸಿನಿಮಾ ಹಾಡಿಗೆ ಯುವಕ,ಯವತಿಯರು ಡ್ಯಾನ್ಸ್‌ ಮಾಡಿದ್ದರು. ಆದ್ರೆ ವಿವೇಕಾನಂದರ ಜಯಂತ್ಯೋತ್ಸವದಲ್ಲಿ ಇದು ಬೇಕಿತ್ತಾ? ಎಂದು ಪ್ರಜ್ಞಾವಂತರು ಹಾಗೂ ವಿವೇಕಾನಂದರ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಾಮಿ ವಿವೇಕಾನಂದರ ತತ್ವಾದರ್ಶಗಳ ವಿರುದ್ಧವಾಗಿ ಇದೆಲ್ಲ ನಡೆದಿದೆ ಅನ್ನೋದು ಅವರ ಅಸಮಾಧಾನಕ್ಕೆ ಕಾರಣವಾಗಿದೆ.