Lockdown Effect: ಜಟಕಾಬಂಡಿ ನಡೆಸೋರ ಬದುಕು‌ ಬರ್ಬಾದ್..!

ಗುಮ್ಮಟನಗರಿಯ ಟಾಂಗಾವಾಲಾಗಳ ಸ್ಥಿತಿ ಕರುಣಾಜನಕವಾಗಿದೆ. ಕೊರೊನಾ ಆರ್ಭಟದಿಂದಾಗಿ ಕರ್ಫ್ಯೂ ಹೊಡೆತಕ್ಕೆ ನಲುಗುತ್ತಿರುವ ಜಟಕಾಬಂಡಿ ನಂಬಿದ ಟಾಂಗಾವಾಲಗಳು ಕುಟುಂಬ ನಡೆಸಲು ಪರದಾಡುವಂತಾಗಿದೆ. ಕುದುರೆಗಳಿಗು ಹೊಟ್ಟೆ ತುಂಬ ಊಟ ಹಾಕೋದಕ್ಕು ಟಾಂಗಾವಾಲಾಗಳು ಪರದಾಡುತ್ತಿದ್ದಾರೆ.

First Published Jan 27, 2022, 1:50 PM IST | Last Updated Jan 27, 2022, 3:05 PM IST

ಗುಮ್ಮಟನಗರಿಯ ಟಾಂಗಾವಾಲಾಗಳ ಸ್ಥಿತಿ ಕರುಣಾಜನಕವಾಗಿದೆ. ಕೊರೊನಾ ಆರ್ಭಟದಿಂದಾಗಿ ಕರ್ಫ್ಯೂ ಹೊಡೆತಕ್ಕೆ ನಲುಗುತ್ತಿರುವ ಜಟಕಾಬಂಡಿ ನಂಬಿದ ಟಾಂಗಾವಾಲಗಳು ಕುಟುಂಬ ನಡೆಸಲು ಪರದಾಡುವಂತಾಗಿದೆ. ಕುದುರೆಗಳಿಗು ಹೊಟ್ಟೆ ತುಂಬ ಊಟ ಹಾಕೋದಕ್ಕು ಟಾಂಗಾವಾಲಾಗಳು ಪರದಾಡುತ್ತಿದ್ದಾರೆ.

ಕಳೆಗುಂದಿದ ವಿಜಯಪುರ ಸಂಕ್ರಾಂತಿ ಜಾತ್ರೆ, ನಂದಿ ಕೋಲುಗಳ ಮೆರವಣಿಯೂ ಇಲ್ಲ

ಕೋವಿಡ್ ಹಿನ್ನೆಲೆ ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ತೀರ ಕಡಿಮೆಯಾಗಿದೆ. ಪ್ರವಾಸಿಗರನ್ನೇ ನಂಬಿಕೊಂಡು ಬದುಕು ನಡೆಸೋ ಟಾಂಗಾವಾಲಗಳ ಬದುಕು ಬೀದಿಗೆ ಬಂದಿದೆ. ಬೆಳಗ್ಗೆಯಿಂದ ಸಂಜೆವರೆಗು ಬಿಸಿಲಲ್ಲಿ ನಿಂತರೂ ಟಾಂಗಾ ಏರುವುದಕ್ಕೆ ಪ್ರವಾಸಿಗರು ಬರುತ್ತಿಲ್ಲ ಎಂದು ಟಾಂಗಾವಾಲಗಳು ನೋವು ತೋಡಿಕೊಂಡಿದ್ದಾರೆ. ಕುದುರೆಗಳನ್ನ ಉಪಾವಾಸ ಇಡೋ ಪರಿಸ್ಥಿತಿಗೆ ಟಾಂಗಾವಾಲಾಗಳು ತಲುಪಿದ್ದು ಐತಿಹಾಸಿಕ ವಿಜಯಪುರ ನಗರದಲ್ಲಿ 100ಕ್ಕು ಅಧಿಕ ಟಾಂಗಾವಾಲಾಗಳು ಪ್ರವಾಸಿಗರನ್ನೇ ನಂಬಿ ಬದುಕುತ್ತಿದ್ದಾರೆ.