ಮದ್ಯದ ದರ ಹೆಚ್ಚಳ ಬೇಡ, ಮಾಡಿದ್ರೆ ಉಗ್ರ ಹೋರಾಟ ಮಾಡುತ್ತೇವೆ: ವೆಂಕಟೇಶ್‌ ಗೌಡ

ಮದ್ಯದ ದರವನ್ನು ಹೆಚ್ಚಳ ಮಾಡಬಾರದು. ಒಂದು ವೇಳೆ ಮಾಡಿದ್ರೆ, ಹೋರಾಟವನ್ನು ಮಾಡುತ್ತೇವೆ ಎಂದು ಕರ್ನಾಟಕ ಮದ್ಯಪಾನ ಪ್ರಿಯರ ಸಂಘದ ಅಧ್ಯಕ್ಷ ವೆಂಕಟೇಶ್‌ ಗೌಡ ಎಚ್ಚರಿಕೆಯನ್ನು ನೀಡಿದ್ದಾರೆ.
 

First Published Jul 9, 2023, 10:32 AM IST | Last Updated Jul 9, 2023, 10:32 AM IST

ಹಾಸನ: ಬಜೆಟ್‌ನಲ್ಲಿ ಮದ್ಯದ ಬೆಲೆಯನ್ನು(liquor price hike) ಹೆಚ್ಚಳ ಮಾಡಿರುವುದಕ್ಕೆ ಮದ್ಯಪ್ರಿಯರು ಸಿಡಿದೆದ್ದಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ಮದ್ಯಪ್ರಿಯರ ಸಂಘದಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೇ ಒಂದು ವೇಳೆ ದರ ಹೆಚ್ಚಳ ಮಾಡಿದ್ರೆ ಹೋರಾಟವನ್ನು ಮಾಡುವುದಾಗಿ ಕರ್ನಾಟಕ ಮದ್ಯಪಾನ ಪ್ರಿಯರ ಸಂಘ ಎಚ್ಚರಿಕೆಯನ್ನು ನೀಡಿದೆ. ಬಜೆಟ್‌ನಲ್ಲಿ ಅಬಕಾರಿ ಸುಂಕವನ್ನು ಶೇ.20ರಷ್ಟು ಹೆಚ್ಚಳ ಮಾಡಲಾಗಿದೆ. ಸಂಘದ ರಾಜ್ಯಾಧ್ಯಕ್ಷ ವೆಂಕಟೇಶ್‌ ಗೌಡ(Venkatesh Gowda) ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ. ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು, ಅಲ್ಲದೇ ಈಗಿನ ದರದಲ್ಲಿ ಶೇ.10ರಷ್ಟು ಕಡಿಮೆ ಮಾಡಬೇಕು ಎಂದು ವೆಂಕಟೇಶ್‌ ಗೌಡ ಒತ್ತಾಯಿಸಿದ್ದಾರೆ. ಪ್ರತಿ ಬಜೆಟ್‌ನಲ್ಲಿ(Budget) ಮದ್ಯದ ದರ ಹೆಚ್ಚಳ ಮಾಡಿದ್ರೆ ನಾವು ಏನು ಮಾಡಬೇಕು. ಒಂದು ವೇಳೆ ದರ ಹೆಚ್ಚಳವಾದ್ರೆ ರಾಜ್ಯಾದ್ಯಂತ ಹೋರಾಟ(protest) ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್‌ ಸರ್ಕಾರದಿಂದ ಪ್ರಮುಖ ಆರೋಪಿ ರಕ್ಷಣೆ ಮಾಡಲಾಗುತ್ತಿದೆ: ಅಭಯ್ ಪಾಟೀಲ್‌ ಆರೋಪ