ಕಾಂಗ್ರೆಸ್‌ ಸರ್ಕಾರದಿಂದ ಪ್ರಮುಖ ಆರೋಪಿ ರಕ್ಷಣೆ ಮಾಡಲಾಗುತ್ತಿದೆ: ಅಭಯ್ ಪಾಟೀಲ್‌ ಆರೋಪ

ಬೆಳಗಾವಿ ಜೈನಮುನಿ ಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದಿದ್ದು, ನಿಜವಾದ ಆರೋಪಿಯನ್ನು ಸರ್ಕಾರ ರಕ್ಷಿಸುತ್ತಿದೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್‌ ಆರೋಪ ಮಾಡಿದ್ದಾರೆ.
 

First Published Jul 9, 2023, 10:05 AM IST | Last Updated Jul 9, 2023, 10:05 AM IST

ಬೆಳಗಾವಿ: ಚಿಕ್ಕೋಡಿಯ ಹಿರೇಕೋಡಿಯ ಜೈನಮುನಿಗಳ ಹತ್ಯೆ(Jain Monk Murder) ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಜೈನಮುನಿ ಕಾಮಕುಮಾರ ನಂದಿ ಮಹಾರಾಜರ(Kamakumar Nandi Maharaj) ಹತ್ಯೆಯನ್ನು ಭೀಕರವಾಗಿ ಮಾಡಲಾಗಿದ್ದು, ಇದೀಗ ಈ ಪ್ರಕರಣ ರಾಜಕೀಯ ತಿರುವು ಪಡೆದಿದೆ. ನಿಜವಾದ ಆರೋಪಿಯನ್ನು ಸರ್ಕಾರ ರಕ್ಷಿಸುತ್ತಿದೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್‌( MLA Abhay Patil) ಆರೋಪ ಮಾಡಿದ್ದಾರೆ. ಅಲ್ಲದೇ ಈ ಪ್ರಕರಣದ ಪ್ರಮುಖ ಆರೋಪಿ ಹೆಸರನ್ನು ಬಹಿರಂಗಗೊಳಿಸುತ್ತಿಲ್ಲ. ಪೊಲೀಸರು ಕೇವಲ ನಾರಾಯಣ್‌ ಮಾಳಿ( ಹೆಸರನ್ನು ಮಾತ್ರ ಹೇಳುತ್ತಿದ್ದಾರೆ ಎಂದು ಶಾಸಕರು ಕಿಡಿಕಾರಿದ್ದಾರೆ. ಸರ್ಕಾರದ ಒತ್ತಡದ ಬಗ್ಗೆ ಅಧಿಕಾರಿಗಳು ಆಫ್‌ ದಿ ರೆಕಾರ್ಡ್‌ ಹೇಳುತ್ತಿದ್ದಾರೆ. ಕೊಲೆಗಡುಕರಿಗೆ ಫ್ರೀ ಸರ್ಕಾರ, ಎಲ್ಲಾ ಫ್ರೀ ಕೊಲೆನೂ ಫ್ರೀ ಎಂದು ಅಭಯ್‌ ಪಾಟೀಲ್ ಆರೋಪ ಮಾಡಿದ್ದಾರೆ. ಮೃತದೇಹ ಕಟ್‌ ಮಾಡಿರುವ ಆರೋಪಿ ಹೆಸರನ್ನು ಸರ್ಕಾರ ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಸತತ 10 ಗಂಟೆಗಳ ಕಾರ್ಯಾಚರಣೆ: ಜೈನಮುನಿ ಮೃತದೇಹ ಪತ್ತೆ, ಆಶ್ರಮದಲ್ಲಿ ನೀರವ ಮೌನ