Uttara Kannada: ಮುಂದುವರಿದ ಮರಳಿನ ಅಭಾವ, ಕಾಮಗಾರಿಗಳು ಅಪೂರ್ಣ, ಗುತ್ತಿಗೆದಾರರು ಕಂಗಾಲು

- ಉತ್ತರಕನ್ನಡ  ಜಿಲ್ಲೆಯಲ್ಲಿ ಮುಂದುವರಿದ ಮರಳಿನ ಅಭಾವ

- ಮರಳುಗಾರಿಕೆ ನಿಂತಿರೋದ್ರಿಂದ ಕಾಮಗಾರಿಗಳು ಅಪೂರ್ಣ

- ಉದ್ದಿಮೆದಾರರು, ಕಾರ್ಮಿಕರು, ಗುತ್ತಿಗೆದಾರರು ಕಂಗಾಲು

First Published Nov 19, 2021, 11:41 AM IST | Last Updated Nov 19, 2021, 12:19 PM IST

ಉತ್ತರಕನ್ನಡ (ನ. 19): ಕಾರವಾರದಲ್ಲಿ (Karwar) ಕಳೆದ ಮೂರುವರೆ ವರ್ಷಗಳಿಂದ ಮರಳು ಗಣಿಗಾರಿಕೆ ಸ್ಥಗಿತಗೊಂಡಿದೆ. ಮರಳು ಸಿಗದೇ ಇರೋದ್ರಿಂದ  ಬಹುತೇಕ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುವಂತಾಗಿದೆ. ಉಸುಕು (Sand) ಸಿಗದೇ ಇರೋದ್ರಿಂದ ಇಲ್ಲಿನ ಜನಸಾಮಾನ್ಯರಿಗೆ ಮನೆ ನಿರ್ಮಿಸಿಕೊಳ್ಳಲು ತೊಂದರೆಯಾಗಿದೆ.  

Chitradurga: ಬೆಳೆ ಬಿತ್ತನೆಗೆ ಖರ್ಚು ಮಾಡೋದು 70 ಸಾವಿರ, ವಿಮೆ ಬರೋದು 7 ಸಾವಿರ, ರೈತರ ಆಕ್ರೋಶ

ಸರ್ಕಾರಿ ಕಾಮಗಾರಿಗಳನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಕೂಡಾ ತೊಂದರೆ ಅನುಭವಿಸಿದ್ದಾರೆ.  ಕಳೆದ ಕೆಲವು ವರ್ಷಗಳಿಂದ ಕಾಳಿ ನದಿಯಲ್ಲಿ ಉಸುಕು ತೆಗೆಯಲು ಜಿಲ್ಲಾಡಳಿತ  ಅವಕಾಶ ನೀಡಿಲ್ಲ. ಹೀಗಾಗಿ ನದಿಯಲ್ಲಿ ಅಪಾರ ಪ್ರಮಾಣದ ಮರಳು ಸಂಗ್ರಹವಾಗಿದೆ. ಭಾರೀ ಮಳೆ ಬಂತಂದ್ರೆ ನದಿಯಲ್ಲಿ ಪ್ರವಾಹ ಕೂಡಾ ಕಾಣಿಸುತ್ತದೆ. ಹೀಗಾಗಿ ಮರಳುಗಾರಿಕೆಗೆ ಅವಕಾಶ ನೀಡಬೇಕೆಂದು ಮರಳು ಉದ್ಯಮದಾರರು ಸರ್ಕಾರವನ್ನು ಒತ್ತಾಯಿಸಿದ್ದರು. ಹೀಗಾಗಿ ಕಳೆದ ಆಗಸ್ಟ್ ತಿಂಗಳಲ್ಲಿ ಮರಳುಗಾರಿಕೆ ನಡೆಸಲು ಸರ್ಕಾರ ಅನುಮತಿ ನೀಡಿದೆ. ಆದ್ರೆ, ಜಿಲ್ಲಾಡಳಿತ ಮಾತ್ರ ಪರವಾನಿಗೆ ನೀಡಲು ಮೀನಮೇಷ ಎಣಿಸುತ್ತಿದೆ.