Chitradurga: ಬೆಳೆ ಬಿತ್ತನೆಗೆ ಖರ್ಚು ಮಾಡೋದು 70 ಸಾವಿರ, ವಿಮೆ ಬರೋದು 7 ಸಾವಿರ, ರೈತರ ಆಕ್ರೋಶ
- ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ವಿಮೆ
- ರೈತರಿಂದ ಪ್ರತೀ ವರ್ಷ ಸರ್ಕಾರಕ್ಕೆ ಬೆಳೆ ವಿಮೆ ಪಾವತಿ
- ಈ ಬಾರಿ ಅತಿವೃಷ್ಠಿಯಿಂದಾಗಿ ಎಕರೆಗಟ್ಟಲೆ ಬೆಳೆನಾಶ
- ರೈತ ಖರ್ಚು ಮಾಡಿದ 10% ಕೂಡ ಬೆಳೆ ವಿಮೆ ಸಿಕ್ಕಿಲ್ಲ!
ಚಿತ್ರದುರ್ಗ (ನ. 19): ಪ್ರಧಾನಮಂತ್ರಿ ಫಸಲ್ ಭೀಮಾ (PMFBY) ಯೋಜನೆಯಡಿ ರೈತರು ಪ್ರತೀ ವರ್ಷ ಸರ್ಕಾರಕ್ಕೆ ಬೆಳೆ ವಿಮೆ ಪಾವತಿ ಮಾಡುತ್ತಾರೆ. ಅಂತೆಯೇ ಕೋಟೆನಾಡು ಚಿತ್ರದುರ್ಗದ ರೈತರೂ ಕೂಡ ಪಾವತಿಸಿದ್ದಾರೆ.
Rain: ಅಕಾಲಿಕ ಮಳೆಗೆ ಬೆಳೆನಾಶ, ಕೊಚ್ಚಿ ಹೋಯ್ತು ರೈತರ ಬದುಕು, ಸಾಕು ಮಾಡೋ ಮಳೆರಾಯ!
ಈ ಬಾರಿ ಅತಿಯಾದ ಮಳೆಯಿಂದಾಗಿ (Rain) ಬೆಳೆಯೆಲ್ಲಾ ನಾಶವಾಗಿ ಹೋಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಈರುಳ್ಳಿ, ಮೆಕ್ಕೆಜೋಳ, ಶೇಂಗಾ ಬಿತ್ತನೆ ಮಾಡುವವರಾಗಿದ್ದು, ಪ್ರತೀ ವರ್ಷ 60ರಿಂದ 70 ಸಾವಿರ ಹಣ ಖರ್ಚು ಮಾಡಿ ಬೆಳೆ ಬೆಳೆದಿರುತ್ತಾರೆ. ಆದ್ರೆ ಬೆಳೆ ವಿಮೆ ಮಾತ್ರ ಅವರು ಖರ್ಚು ಮಾಡಿದ 10% ಕೂಡ ಬಾರದೇ ಇರುವುದು ಅನ್ನದಾತನಿಗೆ ಕಣ್ಣೀರು ತರಿಸಿದೆ. 2.5 ಎಕರೆ ಜಮೀನಿಗೆ ಈರುಳ್ಳಿ ಹಾಕಲು ಖರ್ಚು ಮಾಡಿರೋದು 60 ಸಾವಿರವಾದ್ರೆ ಸರ್ಕಾರ ಇದಕ್ಕೆ ಬೆಳೆ ವಿಮೆ ನೀಡಿರೋದು ಕೇವಲ 7000 ಸಾವಿರ ಮಾತ್ರ. ಆದ್ದರಿಂದ ಬೇಸರಗೊಂಡ ರೈತರು ಇನ್ಮುಂದೆ ಸರ್ಕಾರಕ್ಕೆ ಬೆಳೆ ವಿಮೆ ಕಟ್ಟೋದೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.