Asianet Suvarna News Asianet Suvarna News

ಉತ್ತರ ಕನ್ನಡ ಕುಗ್ರಾಮಗಳಿಗೆ ಲಸಿಕೆ ಪೂರೈಸಲು ಜಿಲ್ಲಾಡಳಿತದಿಂದ ಮಾಸ್ಟರ್ ಪ್ಲ್ಯಾನ್

Jun 30, 2021, 10:51 AM IST

ಕಾರವಾರ (ಜೂ. 30): ಉತ್ತರ ಕನ್ನಡ ಜಿಲ್ಲೆ ದಟ್ಟ ಕಾಡು, ಮಲೆನಾಡು, ಕರಾವಳಿ ಭಾಗಗಳನ್ನು ಹೊಂದಿರುವ ಜಿಲ್ಲೆ.‌ ಮಳೆಗಾಲದಲ್ಲಿ ಇಲ್ಲಿನ ಹಲವು ಹಳ್ಳಿಗಳು, ಗ್ರಾಮಗಳು ಹೊರ ಪ್ರದೇಶಗಳೊಂದಿಗೆ 2-3 ತಿಂಗಳ ಕಾಲ ಸಂಪರ್ಕವನ್ನೇ ಕಡಿದುಕೊಳ್ಳುತ್ತವೆ. ನೆಟ್‌ವರ್ಟ್ ಇರುವುದಿಲ್ಲ, ವಿದ್ಯುತ್ ಕಡಿತ, ಸಂಪರ್ಕವೇ ಇಲ್ಲದೇ ಇರಬೇಕಾಗುತ್ತದೆ.

ಮಳೆಗಾಲದಲ್ಲಿ 6 ತಿಂಗಳು ಹೊರಜಗತ್ತಿನ ಸಂಪರ್ಕವೇ ಇರಲ್ಲ ಈ ಗ್ರಾಮಗಳಿಗೆ

ಈಗ ಇನ್ನೊಂದು ಸಮಸ್ಯೆ ಎದುರಾಗಿದೆ. ಈ ಪ್ರದೇಶದ ಜನರು ಈಗಾಗಲೇ ಒಂದು ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದು, ತಮ್ಮ ಗ್ರಾಮದ ಸಂಪರ್ಕ ಕಳೆದುಕೊಂಡಾಗ ಎರಡನೇ ಡೋಸ್ ಪಡೆಯಲಾಗದ ಭೀತಿ ಎದುರಿಸುತ್ತಿದ್ದಾರೆ. ಈ ಎಲ್ಲಾ ಸವಾಲುಗಳನ್ನು ಎದುರಿಸಲು ಜಿಲ್ಲಾಧಿಕಾರಿ ಮುಲೈ ಮುಹಿಲನ್ ನೇತೃತ್ವದಲ್ಲಿ  ರೆಡಿಯಾಗಿದೆ ಮಾಸ್ಟರ್ ಪ್ಲಾನ್. ಏನದು ಇಲ್ಲಿದೆ ನೋಡಿ..!

Video Top Stories