Asianet Suvarna News Asianet Suvarna News

ಸಮುದ್ರಕ್ಕಿಳಿಯದ ಮೀನುಗಾರರು, ಲಾಭವಿಲ್ಲದೇ ಮಾಲಿಕರು ಕಂಗಾಲು!

Aug 5, 2021, 2:39 PM IST

ಕಾರವಾರ (ಆ. 05): ಜೂನ್- ಜುಲೈನಲ್ಲಿ ಸ್ಥಗಿತಗೊಂಡಿದ್ದ ಮೀನುಗಾರಿಕೆ, ಸರ್ಕಾರದ ಹೊಸ ಮಾರ್ಗಸೂಚಿಯಂತೆ ಪ್ರಾರಂಭಗೊಳ್ಳುತ್ತಿದೆ. ಆದರೆ ಹವಾಮಾನ ವೈಪರೀತ್ಯ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಮೀನುಗಾರರು ಇನ್ನೂ ಸಮುದ್ರಕ್ಕಿಳಿದಿಲ್ಲ. ಹವಾಮಾನ ವೈಪರಿತ್ಯ ದೊಡ್ಡ ಸವಾಲಾಗಿದೆ.

ಉತ್ತರ ಕನ್ನಡದಲ್ಲಿ ಪ್ರವಾಹ ತಂದ ಸಂಕಷ್ಟ: ಪರಿಹಾರಕ್ಕಾಗಿ ಸಂತ್ರಸ್ತರ ಒತ್ತಾಯ

ಸರ್ಕಾರದ ಸಬ್ಸಿಡಿಯಿಂದ ಡಿಸೇಲ್ ದೊರೆಯುತ್ತಿದ್ದರೂ, ಬೆಲೆ ಏರಿಕೆಯಿಂದ ಅಗತ್ಯ ಪ್ರಮಾಣದ ಡಿಸೇಲ್ ಹಾಕಿಸಿಕೊಳ್ಳುವುದು ಸಹ ಹೊರೆಯಾಗುತ್ತಿದೆ. ಬೋಟ್‌ಗಳಿಗೆ ಡಿಸೇಲ್ ಹಾಕಿ ಮೀನುಗಾರಿಕೆಗೆ ತೆರಳಿದರೂ, ದೊರೆಯುವ ಲಾಭ, ಮೀನುಗಾರರ ವೇತನಕ್ಕೆ ಸಾಕಾಗುವುದಿಲ್ಲ. ಹೀಗಿರುವಾಗ ಮೀನುಗಾರಿಕೆ ನಡೆಸುವುದು ಹೇಗೆ ಎಂಬುದು ಮಾಲಿಕರು ಹೇಳುತ್ತಿದ್ದಾರೆ. 

Video Top Stories