ಉತ್ತರ ಕನ್ನಡದಲ್ಲಿ ಪ್ರವಾಹ ತಂದ ಸಂಕಷ್ಟ: ಪರಿಹಾರಕ್ಕಾಗಿ ಸಂತ್ರಸ್ತರ ಒತ್ತಾಯ

* 75 ವರ್ಷದ ಹಿಂದೆ ಬ್ರಿಟಿಷರು ಇದ್ರು, ನಾವೇನು ಬ್ರಿಟಿಷರಲ್ಲಿ ಕೇಳಬೇಕಾ?
*  ಸರಕಾರ‌ ಎಲ್ಲರಿಗೂ ಪರಿಹಾರ ನೀಡಬೇಕು
*  ಪರಿಹಾರ ಒದಗಿಸದಿದ್ದಲ್ಲಿ ಜನರು ಸಾಯಬೇಕಾದ ಪರಿಸ್ಥಿತಿ ಉಂಟಾಗಬಹುದು 

First Published Jul 28, 2021, 10:00 AM IST | Last Updated Jul 28, 2021, 10:00 AM IST

ಕಾರವಾರ(ಜು.28): ಅಧಿಕಾರಿಗಳು ಅರ್ಧ ಗಂಟೆಯ ಮೊದಲು ನೀರು ಬರುತ್ತೆ ಬೇರೆಡೆ ಹೋಗಿ ಅಂತಾರೆ. ಸರಕಾರ ನಮಗೆ ಬೇರೆ ಕಡೆ ಮನೆ ಕಟ್ಟಲು ಜಾಗ ಕೊಟ್ಟಿಲ್ಲ, ಪರಿಹಾರನೂ ನೀಡಿಲ್ಲ. ನಮ್ಮ ಮನೆ ಅತಿಕ್ರಮಣ ಜಾಗದಲ್ಲಿರೋದು ನಾವೆಲ್ಲಿ ಬೇರೆಡೆ ಹೋಗೋದು? ಅಂತ ನೆರೆ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸರಕಾರ‌ ಎಲ್ಲರಿಗೂ ಪರಿಹಾರ ನೀಡಬೇಕು, ಯಾವುದೇ ವ್ಯತ್ಯಾಸ ಮಾಡಬಾರದು. ಜನರು ಉಟ್ಟ ಬಟ್ಟೆಯಲ್ಲೇ ಹೊರಬಂದಿದ್ದು, ಅವರ ಬಳಿ ಈಗ ಏನೂ ಇಲ್ಲ.  ಅಧಿಕಾರಿಗಳು 75 ವರ್ಷದ ದಾಖಲೆ ಇದ್ರೆ ಬೇರೆಡೆ ಜಾಗ ಕೊಡ್ತೀವಿ ಅಂತ ಹೇಳ್ತಾರೆ. 75 ವರ್ಷದ ಹಿಂದೆ ಬ್ರಿಟಿಷರು ಇದ್ರು, ನಾವೇನು ಬ್ರಿಟಿಷರಲ್ಲಿ ಕೇಳಬೇಕಾ?.. ಮನೆಗಳು ಮಾತ್ರವಲ್ಲ, ಅಂಗಡಿಗಳನ್ನು ಕಳೆದುಕೊಂಡವರಿಗೂ ಸರಕಾರ ಪರಿಹಾರ ನೀಡ್ಬೇಕು. ಅಂಗಡಿಗಳು ನಾಶವಾದದ್ದಕ್ಕೆ ಪರಿಹಾರ ಒದಗಿಸದಿದ್ದಲ್ಲಿ ಜನರು ಸಾಯಬೇಕಾದ ಪರಿಸ್ಥಿತಿ ಉಂಟಾಗಬಹುದು ಎಂದು ಹೇಳಿದ್ದಾರೆ. 

ಕಾರವಾರ: 'ಕೊನೆ ಕ್ಷಣದಲ್ಲಿ ನೀರು ಬಿಡುವ ಮಾಹಿತಿಯಿಂದ ಅವಾಂತರ'