ಸರ್ಕಾರದ ನೀತಿಗಳಿಂದಾಗಿ ಬೇಸತ್ತ ಗುತ್ತಿಗೆದಾರರು, ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ

- ಸರ್ಕಾರದ ನೀತಿಗಳಿಂದಾಗಿ  ಬೇಸತ್ತ  ಗುತ್ತಿಗೆದಾರರು

- ಗುತ್ತಿಗೆದಾರರಿಗೆ ಸುಮಾರು 22,000 ಕೋಟಿ ರೂಪಾಯಿ ಬಾಕಿ 
 

First Published Nov 3, 2021, 4:08 PM IST | Last Updated Nov 3, 2021, 4:23 PM IST

ಕಾರವಾರ (ನ. 03): ಸರ್ಕಾರದ ಬಹುತೇಕ ಯಾವುದೇ ಅಭಿವೃದ್ಧಿ ಕಾರ್ಯಗಳಿದ್ದರೂ ಅವುಗಳ ಗುತ್ತಿಗೆ ಪಡೆದು ಕಾಮಗಾರಿ ನಿರ್ವಹಿಸುವವರು ಗುತ್ತಿಗೆದಾರರು.( Contractors) ಸಣ್ಣಪುಟ್ಟ ಕಾಮಗಾರಿಗಳನ್ನು ಪಡೆದುಕೊಂಡು ಕೆಲಸ ನಿರ್ವಹಿಸುತ್ತಿದ್ದವರಿಗೆ ಸರ್ಕಾರದ ನೀತಿಗಳಿಂದಾಗಿ ಕೆಲಸ ನಿರ್ವಹಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಗುತ್ತಿಗೆದಾರರು ಒಟ್ಟಾಗಿ ಬೃಹತ್ ಹೋರಾಟ ಕೈಗೊಂಡಿದ್ದು, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೋರ್ಟ್ ಮೆಟ್ಟಿಲೇರಿದ ಮೊಗೇರ- ಪರಿಶಿಷ್ಟ ಜಾತಿ ಸಮುದಾಯದ ವ್ಯಾಜ್ಯ

 ಇತ್ತೀಚಿನ ದಿನಗಳಲ್ಲಿ ಗುತ್ತಿಗೆ ಕಾಮಗಾರಿ ಹಂಚಿಕೆಯಲ್ಲಿಯೇ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗುತ್ತಿಗೆ ಪಡೆಯೋದಕ್ಕೂ ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವು ಜನಪ್ರತಿನಿಧಿಗಳೂ ಕೂಡಾ ಕಾಮಗಾರಿ ನೀಡಲು ಪರ್ಸೆಂಟೇಜ್ ಕೇಳುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಇದರಿಂದಾಗಿ ಗುತ್ತಿಗೆದಾರರು ಅನಿವಾರ್ಯವಾಗಿ ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳುವಂತಾಗಿದ್ದು, ಇದರಿಂದಾಗಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನ ನಿರ್ವಹಿಸುವುದು ಅಸಾಧ್ಯ ಎಂದು ಗುತ್ತಿಗೆದಾರರು ಅಳಲು ತೋಡಿಕೊಂಡಿದ್ದಾರೆ.