ಜಾತಿ, ಧರ್ಮದ ಆಧಾರದಲ್ಲಿ ಯಾರನ್ನೂ ಸ್ಪೀಕರ್ ಪೀಠದಲ್ಲಿ ಕೂರಿಸಲ್ಲ: ಯು.ಟಿ. ಖಾದರ್
ಜಾತಿ ಧರ್ಮದ ಆಧಾರದಲ್ಲಿ ಯಾರೂ ಪೀಠದಲ್ಲಿ ಕೂರಿಸಲ್ಲ ಎನ್ನುವ ಮೂಲಕ ಜಮೀರ್ ಹೇಳಿಕೆಗೆ ಸ್ಪೀಕರ್ ಯು.ಟಿ. ಖಾದರ್ ತಿರುಗೇಟು ನೀಡಿದ್ದಾರೆ.
ಸ್ಪೀಕರ್ ಯು.ಟಿ. ಖಾದರ್ ಕುರಿತ ಸಚಿವ ಜಮೀರ್ ಅಹ್ಮದ್(Zameer Ahmed Khan) ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಎಲ್ಲರ ಸ್ಪೀಕರ್, ಸ್ಪೀಕರ್ ಸ್ಥಾನ ರಾಜಕೀಯದಿಂದ ನೋಡುವಂಥದ್ದಲ್ಲ. ಸ್ಪೀಕರ್ ಸ್ಥಾನ(Speaker post) ಜಾತಿ, ಧರ್ಮ ಆಧಾರಿತವಾಗಿ ನೋಡುವುದಲ್ಲ. ಎಲ್ಲವನ್ನೂ ಮೆಟ್ಟಿ ಮೇಲೆ ನಿಂತು ಸಂವಿಧಾನ ಬದ್ದವಾಗಿ ನೋಡುವ ಸ್ಥಾನವಾಗಿದೆ ಎಂದು ಯು.ಟಿ.ಖಾದರ್(UT Khader) ಹೇಳಿದ್ದಾರೆ. ಎಲ್ಲರೂ ನನಗೆ ಗೌರವ ಕೊಡೋದಿದ್ರೆ ಅದು ಯು.ಟಿ.ಖಾದರ್‌ಗೆ ಅಲ್ಲ. ಅದು ಸಂವಿಧಾನ ಪೀಠಕ್ಕೆ ಮತ್ತು ಸಭಾಧ್ಯಕ್ಷ ಸ್ಥಾನಕ್ಕೆ. ನಾವು ಯಾರು ಕೂರ್ತೇವೆ, ಅದರ ಗೌರವ ಉಳಿಸಿಕೊಳ್ಳಬೇಕು. ಅವರ ಹೇಳಿಕೆಗೆ ನಾನು ಕಮೆಂಟ್ ಮಾಡಲು ಹೋಗಲ್ಲ. ನನ್ನನ್ನ ಜಾತಿ ಧರ್ಮದ ಆಧಾರದಲ್ಲಿ ಯಾರೂ ಪೀಠದಲ್ಲಿ ಕೂರಿಸಿಲ್ಲ. ಅರ್ಹತೆಗೆ ಅನುಗುಣವಾಗಿ ಸಂವಿಧಾನ ಬದ್ದವಾಗಿ ಕೆಲಸ ನಿರ್ವಹಿಸೋ ಭರವಸೆಯಿಂದ ಕೂರಿಸಿದ್ದಾರೆ. ಸಂವಿಧಾನಕ್ಕೆ ಅನುಗುಣವಾಗಿ ನಾನು ಕೆಲಸ ಮಾಡ್ತೇನೆ. ಎಲ್ಲರಿಗೂ ಗೌರವ ಕೊಡ್ತಾ, ಅವರೂ ಗೌರವ ಕೊಡೋ ಹಾಗೆ ನಾನು ಸರ್ವರ ಸ್ಪೀಕರ್ ಆಗಿ ಕೆಲಸ ಮಾಡ್ತೇನೆ. ಸ್ಪೀಕರ್ ಸ್ಥಾನವನ್ನು ಜಾತಿ ಧರ್ಮ ಮೀರಿ ನಾವು ನೋಡಬೇಕು ಎಂದು ಹೇಳಿದರು.
ಇದನ್ನೂ ವೀಕ್ಷಿಸಿ: ಯುವತಿಗೆ ಮೋಸ ಮಾಡಿದನಾ ಎಂಪಿ ಮಗ..? ಕೇಸ್ ದಾಖಲಾಗ್ತಿದ್ದಂತೆ ರಂಗನಾಥ್ ನಾಪತ್ತೆ..!