Asianet Suvarna News Asianet Suvarna News

ಹುಬ್ಬಳ್ಳಿಯಲ್ಲಿ ಬಸ್‌ ಸಿಗದೆ ಮಹಿಳೆಯ ಪರದಾಟ: ಮಾವನ ಅಂತ್ಯಸಂಸ್ಕಾರಕ್ಕೆ ಹೋಗಲಾಗದೆ ಕಂಗಾಲು

ಸಾರಿಗೆ ಸಿಬ್ಬಂದಿ ಮುಷ್ಕರ| ಮಾವನ ಅಂತ್ಯ ಸಂಸ್ಕಾರಕ್ಕೆ ಹೋಗಲಾರದೆ ಕಂಗಾಲಾದ ಮಹಿಳೆ| ಹುಬ್ಬಳ್ಳಿಯಿಂದ ಕೊಪ್ಪಳ ಜಿಲ್ಲೆಯ ಕುಷ್ಟಗಿಗೆ ತೆರಳಬೇಕಾಗಿದ್ದ ಮಹಿಳೆ| 

First Published Dec 13, 2020, 12:11 PM IST | Last Updated Dec 13, 2020, 12:11 PM IST

ಹುಬ್ಬಳ್ಳಿ(ಡಿ.13): ಸಾರಿಗೆ ಸಿಬ್ಬಂದಿಯ ಮುಷ್ಕರದಿಂದಾಗಿ ಬಸ್‌ ಸಿಗದೆ ಮಹಿಳೆಯೊಬ್ಬಳು ಪರದಾಡಿದ ಘಟನೆ ನಗರದಲ್ಲಿ ಇಂದು(ಭಾನುವಾರ) ಹಳೇ ಬಸ್‌ ನಿಲ್ದಾಣದಲ್ಲಿ ನಡೆದಿದೆ. ಮಾವನ ಅಂತ್ಯ ಸಂಸ್ಕಾರಕ್ಕೆ ಹೋಗಲಾರದೆ ದೇವಮ್ಮ ಎಂಬ ಮಹಿಳೆ ಕಂಗಾಲಾಗಿದ್ದಾರೆ. 

ನಾಲ್ಕು ದಿನವಾಯ್ತು ಬಸ್ ಸಂಚಾರವಿಲ್ಲ : ಇನ್ನೆಷ್ಟು ದಿನ..?

ಹುಬ್ಬಳ್ಳಿಯಿಂದ ಕೊಪ್ಪಳ ಜಿಲ್ಲೆಯ ಕುಷ್ಟಗಿಗೆ ತೆರಳಬೇಕಾಗಿದ್ದ ಮಹಿಳೆಗೆ ಬಸ್‌ ಸಿಕ್ಕಿಲ್ಲ. ಹೀಗಾಗಿ ಮಗಳ ಜೊತೆ ದೇವಮ್ಮ ಕೈಹೊತ್ತು ಕುಳಿತಿದ್ದಾರೆ. 
 

Video Top Stories