Asianet Suvarna News Asianet Suvarna News

ಟೊಮ್ಯಾಟೊ ಬೆಲೆ ದಿಢೀರ್‌ ಕುಸಿತ: ತಿಪ್ಪೆಗೆ ಸುರಿದು ರೈತನಿಂದ ಆಕ್ರೋಶ

ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ದಿಢೀರ್‌ ಕುಸಿತ| ಎರಡು ಟನ್‌ ಟೊಮ್ಯಾಟೊ ತಿಪ್ಪೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ ರೈತ| ಹೋಟೆಲ್‌ಗಳಿಗೆ ಉಚಿತವಾಗಿ ಟೊಮ್ಯಾಟೊ ವಿತರಣೆ ಮಾಡಿದ ರೈತ| 

ರಾಯಚೂರು(ಜ.25): ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ದಿಢೀರ್‌ ಕುಸಿತವಾದ ಹಿನ್ನಲೆಯಲ್ಲಿ ರೈತನೊಬ್ಬ ತಿಪ್ಪೆಗೆ ಟೊಮ್ಯಾಟೊ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ಇಂದು(ಶನಿವಾರ) ನಡೆದಿದೆ. ಇಂದು ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕೆಜಿಗೆ 2 ರು. ಮಾರಾಟವಾಗಿದೆ. 

ಸೂಕ್ತ ಬೆಲೆ ಸಿಗದಿದ್ದರಿಂದ ಕಂಗಾಲಾದ ರೈತ ಮಾರುಕಟ್ಟೆಯಲ್ಲಿ 3 ರು. ಕೆಜಿಗೆ ಖರೀದಿ ಮಾಡುವಂತೆ ಮನವಿ ಮಾಡಿದ್ದಾನೆ. ಮನವಿಗೆ ವ್ಯಾಪಾರಸ್ಥರು ಒಪ್ಪದಿದ್ದಾಗ ಆಕ್ರೋಷಗೊಂಡ ರೈತ ಎರಡು ಟನ್‌ ಟೊಮ್ಯಾಟೊ ತಿಪ್ಪೆಗೆ ಸುರಿದಿದ್ದಾನೆ. ಮಾರುಕಟ್ಟೆ ಸುತ್ತಲಿರುವ ಹೋಟೆಲ್‌ಗಳಿಗೂ ಟೊಮ್ಯಾಟೊ ಉಚಿತವಾಗಿ ವಿತರಣೆ ಮಾಡಿದ್ದಾನೆ.