ರಾಯಚೂರು: ಅನ್ನಭಾಗ್ಯ ಅಕ್ಕಿ ಪಾಲಿಶ್‌ ದಂಧೆ ಬಯಲಿಗೆಳೆದಿದ್ದೇ ತಪ್ಪಾ?

*  ಮಾನ್ವಿ ತಹಶೀಲ್ದಾರ್‌ ಸಂತೋಷ್‌ ರಾಣಿ ವರ್ಗಾವಣೆ
*  ರಾಜ್ಯ ಸರ್ಕಾರದ ಕಾರ್ಯದರ್ಶಿ ಎಂ.ಎಸ್‌. ರಶ್ಮಿ ಆದೇಶ
*  ದಂಧೆ ಬಯಲಿಗೆಳಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಹಶೀಲ್ದಾರ್‌
 

First Published Oct 1, 2021, 10:52 AM IST | Last Updated Oct 1, 2021, 10:52 AM IST

ರಾಯಚೂರು(ಅ.01):  ಅನ್ನಭಾಗ್ಯ ಅಕ್ಕಿ ಪಾಲಿಶ್‌ ದಂಧೆಯನ್ನ ಸುವರ್ಣ ನ್ಯೂಸ್‌ನ ಕವರ್‌ ಸ್ಟೋರಿ ತಂಡ ಬಯಲಿಗೆಳಿದಿತ್ತು. ಆದರೆ, ಈ ದಂಧೆಯನ್ನ ಬಯಲಿಗೆಳಿದಿದ್ದೇ ತಪ್ಪಾಯ್ತಾ? ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಅಕ್ಕಿ ದಂಧೆಯನ್ನ ಬಯಲು ಮಾಡಿದ್ದಕ್ಕೆ ತಹಶೀಲ್ದಾರ್‌ ಅವರನ್ನ ವರ್ಗಾವಣೆ ಮಾಡಲಾಗಿದೆ. ಈ ದಂಧೆಯನ್ನ ಬಯಲಿಗೆಳಿಯುವಲ್ಲಿ ಮಾನ್ವಿ ತಹಶೀಲ್ದಾರ್‌ ಸಂತೋಷ್‌ ರಾಣಿ ಅವರು ಪ್ರಮುಖ ಪಾತ್ರವನ್ನ ವಹಿಸಿದ್ದರು. ರಾಜ್ಯ ಸರ್ಕಾರದ ಕಾರ್ಯದರ್ಶಿ ಎಂ.ಎಸ್‌. ರಶ್ಮಿ ಅವರು ಆದೇಶ ಹೊರಡಿಸಿದ್ದಾರೆ. 

ಮಿನುಗುತಾರೆ ಕಲ್ಪನಾ ಪ್ರಶಸ್ತಿ: ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಸುಗುಣಾಗೆ ಪ್ರಶಸ್ತಿ