ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್: ಶಿಕ್ಷಕನ ನೆರವಿಗೆ ಬಂದ ಜನರು
ಖಾಸಗಿ ಶಾಲಾ ಶಿಕ್ಷಕನೋರ್ವ ಲಾಕ್ ಡೌನ್ ನಿಂದಾಗಿ ಸಂಬಳವಿಲ್ಲದೇ ಬೀದಿ ಬದಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿರುವಂತಹ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ಮೊನ್ನೆ ತಾನೇ ಸುವರ್ಣ ನ್ಯೂಸ್ ನಲ್ಲಿ ಸುದ್ದಿ ಪ್ರಸಾರ ವಾಗ್ತಿದ್ದಂತೆ ಆ ಶಿಕ್ಷಕನ ಸಹಾಯಕ್ಕೆ ಜನರು ಕೈ ಚಾಚಿ ಮುಂದೆ ಬಂದಿದ್ದಾರೆ.
ಚಿತ್ರದುರ್ಗ, (ಜುಲೈ, 01): ಖಾಸಗಿ ಶಾಲಾ ಶಿಕ್ಷಕನೋರ್ವ ಲಾಕ್ ಡೌನ್ ನಿಂದಾಗಿ ಸಂಬಳವಿಲ್ಲದೇ ಬೀದಿ ಬದಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿರುವಂತಹ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ಮೊನ್ನೆ ತಾನೇ ಸುವರ್ಣ ನ್ಯೂಸ್ ನಲ್ಲಿ ಸುದ್ದಿ ಪ್ರಸಾರ ವಾಗ್ತಿದ್ದಂತೆ ಆ ಶಿಕ್ಷಕನ ಸಹಾಯಕ್ಕೆ ಜನರು ಕೈ ಚಾಚಿ ಮುಂದೆ ಬಂದಿದ್ದಾರೆ. ಶಿಕ್ಷಕನ ತಂದೆಗೆ ಅಸ್ತಮಾ ಕಾಯಿಲೆ ಇದ್ದಿದ್ದರಿಂದ ಆ ಶಿಕ್ಷಕ ಪ್ರತೀ ತಿಂಗಳು ಔಷಧಿಯನ್ನು ಒದಗಿಸುವುದು ತುಂಬಾ ಕಷ್ಟವಾಗುತ್ತಿತ್ತು ಎಂದು ಸುವರ್ಣ ನ್ಯೂಸ್ ನೊಂದಿಗೆ ಆಳಲು ತೋಡಿಕೊಂಡಿದ್ದ.
ಲಾಕ್‌ಡೌನ್‌ನಿಂದ ಸಂಬಳವಿಲ್ಲ, ದುಡಿಮೆಗಾಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ ಶಿಕ್ಷಕ
ಆದರೆ ಈ ಸುದ್ದಿಯನ್ನು ವೀಕ್ಷಿಸಿದ ನಗರದ ಗುರುಕೃಪ ಮೆಡಿಕಲ್ ಶಾಪ್ ನ ಮಾಲೀಕರಾದ ಧನಂಜಯ್ ಅವರು, ಕೂಡಲೇ ಸಂಪರ್ಕಿಸಿ ಆತನ ತಂದೆಯ ಚಿಕಿತ್ಸೆಗೆ ಪ್ರತೀ ತಿಂಗಳು ಆಗುವ ಮೆಡಿಸಿನ್ ಅನ್ನು ನಮ್ಮ ಮೆಡಿಕಲ್ ಶಾಪ್ ನಿಂದಲೇ ಲಾಕ್ ಡೌನ್ ಮುಗಿಯುವವರೆಗೂ ವಿತರಿಸಲಾಗುವುದು ಎಂದರು. ಇನ್ನೂ ಈ ಬಗ್ಗೆ ಖಾಸಗಿ ಶಿಕ್ಷಕ ಅವಿನಾಶ್ ಕೂಡ ಸಂತಸ ವ್ಯಕ್ತಪಡಿಸಿ ಸುವರ್ಣ ನ್ಯೂಸ್ ಗೆ ಅಭಿನಂದನೆಯನ್ನು ಸಲ್ಲಿಸಿದರು.