Asianet Suvarna News Asianet Suvarna News

ಪದೇ ಪದೇ ಭೂಕಂಪನ, ಬೆಚ್ಚಿಬಿದ್ದ ಗುಮ್ಮಟನಗರಿ ಜನ.! ವಿಜ್ಞಾನಿಗಳು ಹೇಳೋದೇನು.?

ಕಳೆದೊಂದು ತಿಂಗಳಿಂದ ಉತ್ತರ ಕರ್ನಾಟಕದ ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳ ನಾನಾ ಭಾಗಗಳಲ್ಲಿ ಭೂಮಿ ಕಂಪಿಸುತ್ತಿದ್ದು, ನಾಗರಿಕರು ಭಯಭೀತಿಗೊಂಡಿದ್ದಾರೆ.

ವಿಜಯಪುರ (ಅ. 12): ಕಳೆದೊಂದು ತಿಂಗಳಿಂದ ಉತ್ತರ ಕರ್ನಾಟಕದ ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳ ನಾನಾ ಭಾಗಗಳಲ್ಲಿ ಭೂಮಿ ಕಂಪಿಸುತ್ತಿದ್ದು, ನಾಗರಿಕರು ಭಯಭೀತಿಗೊಂಡಿದ್ದಾರೆ. ಈ ಸರಣಿ ಕಂಪನಗಳು ಭೂಕಂಪನವೋ ಅಥವಾ ಕೇವಲ ಭೂಮಿಯಿಂದ ಬರುತ್ತಿರುವ ಸದ್ದೋ ಎಂದು ಜನರು ಗೊಂದಲಕ್ಕೊಳಗಾಗಿದ್ದಾರೆ.

ವಿಜಯಪುರ : ಭೂಕಂಪನದ ಭೀತಿ: ಊರು ಬಿಡ್ತಿದ್ದಾರೆ ಜನ

ಸೆ.4 ರಿಂದ ಅ.11ರವರೆಗಿನ ಅವಧಿಯಲ್ಲಿ ಜಿಲ್ಲೆಯ ವಿಜಯಪುರ, ಸಿಂದಗಿ, ಬ.ಬಾಗೇವಾಡಿ, ಕೊಲ್ಹಾರ, ತಿಕೋಟಾ ತಾಲೂಕುಗಳಲ್ಲಿ ಭೂಮಿ ಕಂಪಿಸಿದೆ. ಒಟ್ಟು ಎಂಟು ಬಾರಿ ಭೂಮಿ ಕಂಪನವಾಗಿದ್ದು, ಐದು ಬಾರಿ ಭೂಕಂಪನವು ರಿಕ್ಟರ್‌ ಮಾಪಕದಲ್ಲಿ ದಾಖಲಾಗಿದೆ.ಹೆಚ್ಚು ಮಳೆಯಾದ ಕಡೆಗೆ ಭೂಮಿಯೊಳಗಿನ ಸ್ತರಗಳು ಚಲಿಸುತ್ತವೆ. ಇಂತಹ ಸಂದರ್ಭದಲ್ಲಿ ಭೂಕಂಪನದಂತಹ ಅನುಭವವಾಗುತ್ತದೆ. ಆದರೆ, ಅದು ಭೂಕಂಪನವಲ್ಲ, ಶಬ್ದ ಕಂಪನ ಎಂದೂ ತಜ್ಞರ ತಂಡ ವಿಶ್ಲೇಷಣೆ ಮಾಡಿತ್ತು. ಹೀಗಾಗಿ ಜಿಲ್ಲೆಯ ನಾನಾ ಭಾಗಗಳಲ್ಲಿ ಸಂಭವಿಸುತ್ತಿರುವ ಭೂಕಂಪನಕ್ಕೂ ಇದೆ ಕಾರಣವಿರಬಹುದೇ ಎಂಬ ಅನುಮಾನ ಕೂಡ ಈಗ ಬಲವಾಗಿದೆ.

Video Top Stories