ವಿಜಯಪುರ: ಭೂಕಂಪನದ ಭೀತಿ: ಊರು ಬಿಡ್ತಿದ್ದಾರೆ ಜನ

ಕಳೆದೊಂದು ತಿಂಗಳಿಂದ ಉತ್ತರ ಕರ್ನಾಟಕದ ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳ ನಾನಾ ಭಾಗಗಳಲ್ಲಿ ಭೂಮಿ ಕಂಪಿಸುತ್ತಿದ್ದು, ನಾಗರಿಕರು ಭಯಭೀತಿಗೊಂಡಿದ್ದಾರೆ. 

First Published Oct 12, 2021, 3:49 PM IST | Last Updated Oct 12, 2021, 3:49 PM IST

ವಿಜಯಪುರ (ಅ. 12): ಕಳೆದೊಂದು ತಿಂಗಳಿಂದ ಉತ್ತರ ಕರ್ನಾಟಕದ ವಿಜಯಪುರ (vijyapura) ಮತ್ತು ಕಲಬುರಗಿ (kalaburgi) ಜಿಲ್ಲೆಗಳ ನಾನಾ ಭಾಗಗಳಲ್ಲಿ ಭೂಮಿ ಕಂಪಿಸುತ್ತಿದ್ದು, ನಾಗರಿಕರು ಭಯಭೀತಿಗೊಂಡಿದ್ದಾರೆ.  ಭೂಕಂಪದ (Earthquake) ಭಯಕ್ಕೆ ಹಳ್ಳಿಗಳನ್ನು ತೊರೆಯುತ್ತಿದ್ದಾರೆ. ಸಣ್ಣ ಸಣ್ಣ ಮಕ್ಕಳನ್ನು ಕರೆದುಕೊಂಡು ಸಂಬಂಧಿಕರ ಮನೆಗೆ ತೆರಳುತ್ತಿದ್ದಾರೆ. 

ಡಿಕೆಶಿ ಸೋಷಿಯಲ್ ಮೀಡಿಯಾ ನಿರ್ವಹಿಸುತ್ತಿದ್ದ ಕಂಪನಿ ಮೇಲೆ ಐಟಿ ದಾಳಿ!

ಸೆ.4ರಿಂದ ಅ.11ರವರೆಗಿನ ಅವಧಿಯಲ್ಲಿ ಜಿಲ್ಲೆಯ ವಿಜಯಪುರ, ಸಿಂದಗಿ, ಬ.ಬಾಗೇವಾಡಿ, ಕೊಲ್ಹಾರ, ತಿಕೋಟಾ ತಾಲೂಕುಗಳಲ್ಲಿ ಭೂಮಿ ಕಂಪಿಸಿದೆ. ಒಟ್ಟು ಎಂಟು ಬಾರಿ ಭೂಮಿ ಕಂಪನವಾಗಿದ್ದು, ಐದು ಬಾರಿ ಭೂಕಂಪನವು ರಿಕ್ಟರ್‌ ಮಾಪಕದಲ್ಲಿ ದಾಖಲಾಗಿದೆ.

Video Top Stories