Flyover Construction in Karwar: ಸುರಕ್ಷತಾ ಕ್ರಮಗಳಿಲ್ಲದೇ ಕಾಮಗಾರಿ, ವಾಹನ ಸವಾರರಿಗೆ ಅಪಾಯ
ಕಾರವಾರ (Karwar) ನಗರಕ್ಕೆ ಹೊಂದಿಕೊಂಡೇ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಫ್ಲೈಓವರ್ (Fly Over) ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸುರಕ್ಷತಾ ಕ್ರಮ ಕೈಗೊಳ್ಳುವಲ್ಲಿ ಮಾತ್ರ ಗುತ್ತಿಗೆ ಪಡೆದ ಐಆರ್‌ಬಿ ಕಂಪೆನಿ ನಿರ್ಲಕ್ಷ್ಯ ವಹಿಸಿದೆ.
ಉತ್ತರಕನ್ನಡ (ಡಿ. 17): ಕಾರವಾರ (Karwar) ನಗರಕ್ಕೆ ಹೊಂದಿಕೊಂಡೇ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಫ್ಲೈಓವರ್ (Fly Over) ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸುರಕ್ಷತಾ ಕ್ರಮ ಕೈಗೊಳ್ಳುವಲ್ಲಿ ಮಾತ್ರ ಗುತ್ತಿಗೆ ಪಡೆದ ಐಆರ್‌ಬಿ ಕಂಪೆನಿ ನಿರ್ಲಕ್ಷ್ಯ ವಹಿಸಿದೆ.
ಕಾರವಾರ ನಗರಕ್ಕೆ ಹೊಂದಿಕೊಂಡೇ ಚತುಷ್ಪಥ ಮಾರ್ಗವಿದ್ದು, ರಸ್ತೆ ದಾಟಲು ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದೆ. ಕಾರವಾರ ನಗರದ ಲಂಡನ್ ಬ್ರಿಡ್ಜ್‌ನಿಂದ ಆರ್.ಟಿ.ಓ ಕಚೇರಿಯವರೆಗೆ ಸುಮಾರು 1.4 ಕಿಲೋ ಮೀಟರ್ ಉದ್ದದ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದ್ದು, ಕೊರೊನಾ 2ನೇ ಅಲೆಯ ಬಳಿಕ ಸ್ಥಗಿತಗೊಂಡಿದ್ದ ಕಾಮಗಾರಿ ಸದ್ಯ ಮುಂದುವರಿದಿದೆ. ಆದ್ರೆ, ಕಾಮಗಾರಿ ಪ್ರದೇಶದಲ್ಲಿ ಕಾರ್ಮಿಕರು ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲವಾಗಿದ್ದು, ಕಾಮಗಾರಿಯ ವಸ್ತುಗಳನ್ನು ಹೆದ್ದಾರಿಯ ಅಕ್ಕಪಕ್ಕ ಎಲ್ಲೆಂದರಲ್ಲಿ ಹಾಕಿಟ್ಟಿದ್ದಾರೆ.
Plight of Coolies: ಇತ್ತ ತೆರವಿನ ಭಯ, ಅತ್ತ ಕರೆಂಟ್ ಕಟ್, ಕತ್ತಲೆಯಲ್ಲಿ ಬದುಕು, ಬೇಕಿದೆ ಸೂರು
ಹೀಗಾಗಿ ಒಂದೆಡೆ ಕಾರ್ಮಿಕರು ಅಪಾಯಕಾರಿಯಾಗಿ ಕೆಲಸದಲ್ಲಿ ತೊಡಗಿಕೊಂಡಿದ್ದು, ಇನ್ನೊಂದೆಡೆ ರಸ್ತೆಯಲ್ಲಿ ಸಂಚರಿಸುವ ಸವಾರರು ಓಡಾಡಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಫ್ಲೈ ಓವರ್ ಕಾಮಗಾರಿ ವೇಳೆ ಏನಾದರೂ ಅವಘಡಗಳು ಸಂಭವಿಸಿದಲ್ಲಿ ಕಾರ್ಮಿಕರು ಸೇರಿದಂತೆ ವಾಹನ ಸವಾರರಿಗೂ ಕೂಡಾ ಅಪಾಯ ಎದುರಾಗುವ ಆತಂಕದ ವಾತಾವರಣವಿದೆ.