Raichur| ಮಾನ್ವಿ ಪೊಲೀಸ್ ಠಾಣೆ ದೇಶದಲ್ಲೇ ನಂ.5..!
* ಕೇಂದ್ರ ಗೃಹ ಸಚಿವಾಲಯ ಸಮೀಕ್ಷೆಯಲ್ಲಿ ಟಾಪ್ 10ರೊಳಗೆ ಸ್ಥಾನ
* ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪೊಲೀಸ್ ಠಾಣೆ
* ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಮತ್ತು ಪೊಲೀಸ್ ಆಧುನೀಕರಣ ವಿಭಾಗ ನಡೆಸಿದ ಸಮೀಕ್ಷೆ
ಮಾನ್ವಿ(ನ.22): ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪೊಲೀಸ್ ಠಾಣೆ ಈಗ ದೇಶದಲ್ಲೇ ಅತ್ಯುತ್ತಮ ಪೊಲೀಸ್ ಠಾಣೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಗೃಹ ಸಚಿವಾಲಯ ಈ ವರ್ಷ ನಡೆಸಿದ ಸಮೀಕ್ಷೆಯಲ್ಲಿ ಈ ಠಾಣೆ 5ನೇ ಸ್ಥಾನ ಪಡೆದಿದೆ. ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಮತ್ತು ಪೊಲೀಸ್ ಆಧುನೀಕರಣ ವಿಭಾಗ ನಡೆಸಿದ ಸಮೀಕ್ಷೆಯಲ್ಲಿ ದೇಶದಲ್ಲಿ ಒಟ್ಟು 10 ಅತ್ಯುತ್ತಮ ಪೊಲೀಸ್ ಠಾಣೆಗಳು ಆಯ್ಕೆಯಾಗಿವೆ. ಪ್ರಧಾನ ಮಂತ್ರಿಗಳ ನಿರ್ದೇಶನದಂತೆ ಕಾರ್ಯಕ್ಷಮತೆ ಆಧಾರದ ಮೇಲೆ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಸಮೀಕ್ಷೆ ನಡೆದು ಮಾನ್ವಿ ಠಾಣೆ 5ನೇ ಸ್ಥಾನ ಪಡೆದಿದೆ.
Rain: ತಿರುಪತಿಯಲ್ಲಿ ಮಹಾಪ್ರವಾಹ, ವೆಂಕಟರಮಣನಿಗೂ ತಪ್ಪಲಿಲ್ಲ ಸಂಕಟ!
ಪೊಲೀಸರಿಗೆ ಸುವ್ಯವಸ್ಥೆಯ ಕಟ್ಟಡ, ಸಿಬ್ಬಂದಿ ಶಿಸ್ತು ಮತ್ತು ಕಾರ್ಯದಕ್ಷತೆ, ಕಡತಗಳ ವಿಲೇವಾರಿ, ಮೂಲಭೂತ ಸೌಕರ್ಯಗಳು, ಅಪರಾಧ ತಡೆಗಟ್ಟುವಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮಗಳು, ಸಂಚಾರ ಸುರಕ್ಷತೆ, ರಸ್ತೆಯಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಗಟ್ಟುವಲ್ಲಿ ಪೊಲೀಸರ ಕಾರ್ಯ ಸೇರಿ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡು ರಾರಯಂಕ್ ನೀಡಲಾಗಿದೆ. ಇದರಲ್ಲಿ ದೆಹಲಿಯ ಸದಾರ್ ಬಜಾರ್ ಪೊಲೀಸ್ ಠಾಣೆ, ಒಡಿಶಾದ ಗಂಜಾಮ್ ಜಿಲ್ಲೆಯ ಗಂಗಾಪುರ ಠಾಣೆ, ಹರಾರಯಣದ ಫತೇಹಾಬಾದ್‌ನ ಭಟ್ಟು ಕಾಲನ್, ಗೋವಾದ ಉತ್ತರ ಗೋವಾದಲ್ಲಿರುವ ವಲ್ಪೋಯಿ ಮೊದಲ ನಾಲ್ಕು ಸ್ಥಾನದಲ್ಲಿರುವ ಠಾಣೆಗಳಾಗಿದ್ದು, ಐದನೇ ಸ್ಥಾನದಲ್ಲಿ ಮಾನ್ವಿ ಠಾಣೆ ವಿರಾಜಮಾನವಾಗಿದೆ.