ಕೊರೋನಾತಂಕದ ಮಧ್ಯೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಭರ್ಜರಿ ಡ್ಯಾನ್ಸ್..!
ಸರ್ಕಾರ ಆದೇಶ ಉಲ್ಲಂಘಿಸಿದ ಕಾಲೇಜು| ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದ ಘಟನೆ|ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ, ಜೊತೆಗೆ ಮಾಸ್ಕ್ ಧರಿಸದ ವಿದ್ಯಾರ್ಥಿಗಳು| ಸರ್ಕಾರದ ಆದೇಶಗಳಿಗೆ ಕಿಂಚಿತ್ತೂ ಬೆಲೆ ಕೊಡದ ಕಾಲೇಜು|
ರಾಯಚೂರು(ಜೂ.13): ಸರ್ಕಾರದ ಆದೇಶಗಳನ್ನ ಉಲ್ಲಂಘಿಸಿ ವಿದ್ಯಾರ್ಥಿಗಳನ್ನ ಸೇರಿಸಿ ಕಾಲೇಜೊಂದು ಡ್ಯಾನ್ಸ್ ಮಾಡಿಸಿದ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಲೊಯೆಲಾ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಸಾಕಷ್ಟು ವಿದ್ಯಾರ್ಥಿಗಳು ಸೇರಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಇಲ್ಲಿ ಸೇರಿದ್ದ ಯಾವ ವಿದ್ಯಾರ್ಥಿಯೂ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ, ಜೊತೆಗೆ ಯಾರೊಬ್ಬರು ಮಾಸ್ಕ್ ಕೂಡ ಧರಿಸಿಲ್ಲ.
ಜೂ. 17 ರಂದು ಬಿಎಸ್‌ವೈ ಜೊತೆ ಮೋದಿ ಸಂವಾದ; ಇನ್‌ಸೈಡ್ ಪಾಲಿಟಿಕ್ಸ್ ಇದು!
ಇದರಲ್ಲಿ ಯಾರಿಂದಾದ್ರೂ ಕೊರೋನಾ ವೈರಸ್ ಹಬ್ಬಿದ್ರೆ ಯಾರೂ ಜವಾಬ್ದಾರರು ಎಂಬ ಪ್ರಶ್ನೆ ಉದ್ಭವವಾಗಿದೆ. ಸರ್ಕಾರದ ಆದೇಶಗಳಿಗೆ ಈ ಕಾಲೇಜು ಕಿಂಚಿತ್ತೂ ಬೆಲೆ ಕೊಟ್ಟಿಲ್ಲ. ಕಾಲೇಜು ತೆರೆಯದಂತೆ ಸರ್ಕಾರ ಆದೇಶ ಹೊರಡಿಸಿದೆ. ಅದರೂ ಕೂಡ ಈ ಕಾಲೇಜು ವಿದ್ಯಾರ್ಥಿಗಳನ್ನ ಸೇರಿಸಿದೆ.