ಅಗ್ನಿಕೊಂಡ ನೆರವೇರುವ ಮುನ್ನವೇ ಅರ್ಚಕ ಕುಸಿದು ಬಿದ್ದು ಸಾವು!

ಗ್ರಾಮದೇವತೆಯ ಕೊಂಡೋತ್ಸವ  ನೆರವೇರುವ ಮುನ್ನ ಮೆರವಣಿಗೆಯಲ್ಲಿ ತೆರಳುತ್ತಿದ್ದ ಅರ್ಚಕ  ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಮಾವತ್ತೂರು ಗ್ರಾಮದಲ್ಲಿ ನಡೆದಿದೆ. 

First Published Apr 3, 2023, 5:11 PM IST | Last Updated Apr 3, 2023, 5:11 PM IST

ಗ್ರಾಮದೇವತೆಯ ಕೊಂಡೋತ್ಸವ  ನೆರವೇರುವ ಮುನ್ನ  ಮೆರವಣಿಗೆಯಲ್ಲಿ ತೆರಳುತ್ತಿದ್ದ ಅರ್ಚಕ  ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಮಾವತ್ತೂರು ಗ್ರಾಮದಲ್ಲಿ ನಡೆದಿದೆ. ಮಾವತ್ತೂರು ಗ್ರಾಮದ ಮಾವತ್ತೂರಮ್ಮ ದೇವಿಯ ಅರ್ಚಕರಾಗಿದ್ದ ನಾಗರಾಜು ಎಂಬುವವರು ಸಾವನ್ನಪ್ಪಿದ್ದಾರೆ. ಮಹಿಳೆಯೊಬ್ಬಳು  ವಿಚಿತ್ರವಾಗಿ ಕುಣಿಯಲಾರಂಭಿಸಿದ್ದು, ಅರ್ಚಕ ಮಹಿಳೆಗೆ ಬೆತ್ತದಿಂದ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ ಕಾಲಿಗೆ ಬೀಳುತ್ತಿದ್ದಂತೆ ಕುಸಿದು ಬಿದ್ದು ಅರ್ಚಕ ನಾಗರಾಜು  ಸಾವನ್ನಪ್ಪಿದ್ದಾರೆ.  ಮೆರವಣಿಗೆ ವೇಳೆಯೇ ಕುಸಿದು ಬಿದ್ದಿದ್ದ ಅರ್ಚಕ ನಾಗರಾಜುರನ್ನು ತಕ್ಷಣವೇ ಗ್ರಾಮಸ್ಥರು ಆಸ್ಪತ್ರೆಗೆ ಸಾಗಿಸಲು ಕರೆದೊಯ್ದಿದ್ದಾರೆ. ಆದರೆ ಮಾರ್ಗಮಧ್ಯೆಯೇ ನಾಗರಾಜು ಸಾವನ್ನಪ್ಪಿದ್ದಾರೆ. 

Video Top Stories