Asianet Suvarna News Asianet Suvarna News

ಹುಬ್ಬಳ್ಳಿಯಲ್ಲಿ ಬಿಗಿ ಲಾಕ್‌ಡೌನ್‌: ಹಾಲು, ದಿನಸಿ ಖರೀದಿಗೂ ಅವಕಾಶವಿಲ್ಲ

ಹುಬ್ಬಳ್ಳಿಯಲ್ಲಿ ಎರಡನೇ ಹಂತದ ಲಾಕ್‌ಡೌನ್ ಆರಂಭವಾಗಿದೆ. ಹುಬ್ಬಳ್ಳಿಯಲ್ಲಿ ಕಳೆದ 4 ದಿನಗಳಿಂದಲೂ ಸಿಳ್‌ಡೌನ್ ನಂತಹ ಸ್ಥಿತಿ ಇತ್ತು. ಒಂದೇ ಕುಟುಂಬದಲ್ಲಿ 5 ಜನರಿಗೆ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಇನ್ನಷ್ಟು ಭದ್ರತೆ ಏರ್ಪಡಿಸಲಾಗಿದೆ.
First Published Apr 15, 2020, 1:44 PM IST | Last Updated Apr 15, 2020, 1:44 PM IST

ಹುಬ್ಬಳ್ಳಿ(ಏ.15): ಹುಬ್ಬಳ್ಳಿಯಲ್ಲಿ ಎರಡನೇ ಹಂತದ ಲಾಕ್‌ಡೌನ್ ಆರಂಭವಾಗಿದೆ. ಹುಬ್ಬಳ್ಳಿಯಲ್ಲಿ ಕಳೆದ 4 ದಿನಗಳಿಂದಲೂ ಸಿಳ್‌ಡೌನ್ ನಂತಹ ಸ್ಥಿತಿ ಇತ್ತು. ಒಂದೇ ಕುಟುಂಬದಲ್ಲಿ 5 ಜನರಿಗೆ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಇನ್ನಷ್ಟು ಭದ್ರತೆ ಏರ್ಪಡಿಸಲಾಗಿದೆ.

ಪೊಲೀಸರು ಬೆಳಗ್ಗೆ ೬ ಗಂಟೆಯಿಂದಲೇ ಬೀದಿಗಿಳಿಯುತ್ತಿದ್ದು, ರಸ್ತೆಗಿಳಿಯುವವರ ಮೇಲೆ ನಿಗಾ ಇಡಲಾಗುತ್ತಿದೆ. ಐದು ಕೊರೋನಾ ಪ್ರಕರಣ ಕಂಡು ಬಂದ ಭಾಗದಲ್ಲಿ ಹಾಲು, ದಿನಸಿ ತರಕಾರಿಯೂ ಸಿಗುತ್ತಿಲ್ಲ. ಅಗತ್ಯ ವಸ್ತುಗಳನ್ನೂ ಮಾರಾಟ ಮಾಡಲಾಗುತ್ತಿಲ್ಲ.

ಲಾಕ್‌ಡೌನ್‌: ಬಾಗಲಕೋಟೆಯಲ್ಲಿ ಆಸ್ಪತ್ರೆಗಳು ಬಂದ್‌, ರೋಗಿಗಳ ಪರದಾಟ

ಉಳಿದ ಪ್ರದೇಶದಲ್ಲಿ ಆರು ಗಂಟೆಯಿಂದ 8 ಗಂಟೆಯ ವರೆಗೆ ತರಕಾರಿ ಹಾಲು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಎರಡನೇ ಹಂತದ ಲಾಕ್‌ಡೌನ್‌ಗೆ ಪೊಲೀಸರು ಸಂಪೂರ್ಣ ಸಿದ್ಧತೆ ನಡೆಸಿ ಮುಖ್ಯ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಸಂಪೂರ್ಣ ಕ್ಲೋಸ್ ಮಾಡಲಾಗಿದೆ.