ಹ್ಯಾಟ್ಸ್‌ಆಫ್ ಸ್ಟುಡೆಂಟ್ಸ್: ಭವಿಷ್ಯ ರೂಪಿಸಿದ ಶಿಕ್ಷಕಿಗೆ ಸೂರು ಕಲ್ಪಿಸಿದ ವಿದ್ಯಾರ್ಥಿಗಳು!
- ಇದು ಅಕ್ಷರ ಕಲಿಸಿದ ಶಿಕ್ಷಕಿಯ ಆರ್ಥಿಕ ಸಂಕಷ್ಟ ಕಂಡ ವಿದ್ಯಾರ್ಥಿಗಳು ಸೇರಿ ಲಕ್ಷಾಂತರ ಮೌಲ್ಯದ ಮನೆ ನಿರ್ಮಿಸಿಕೊಟ್ಟು ಗುರುಭಕ್ತಿ ಮೆರೆದ ಕಥೆ.
- 15 ಲಕ್ಷದ ಹೊಸ ಮನೆ ಕಟ್ಟಿಸಿ ಅಕ್ಷರ ಕಲಿಸಿದ ಬಡ ಶಿಕ್ಷಕಿಗೆ ಆಶ್ರಯ ಕಲ್ಪಿಸಿದ ಹಳೆ ವಿದ್ಯಾರ್ಥಿಗಳು
- ಪರಿಮಳಾ ಟೀಚರ್ ಕನ್ನಡ ಶಿಕ್ಷಕರಾಗಿದ್ದವರು, ಅವರಿಂದ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ.
ಬಳ್ಳಾರಿ (ಸೆ.08): ಇದು ಅಕ್ಷರ ಕಲಿಸಿದ ಶಿಕ್ಷಕಿಯ ಆರ್ಥಿಕ ಸಂಕಷ್ಟ ಕಂಡ ವಿದ್ಯಾರ್ಥಿಗಳು ಸೇರಿ ಲಕ್ಷಾಂತರ ಮೌಲ್ಯದ ಮನೆ ನಿರ್ಮಿಸಿಕೊಟ್ಟು ಗುರುಭಕ್ತಿ ಮೆರೆದ ಕಥೆ. ಹಳೆ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿದ ಬಡ ಶಿಕ್ಷಕಿಗೆ 15 ಲಕ್ಷದ ಹೊಸ ಮನೆ ಕಟ್ಟಿಸಿ ಆಶ್ರಯ ಕಲ್ಪಿಸಿದ ಮನಮಿಡಿಯುವ, ಸ್ಫೂರ್ತಿ ತುಂಬುವ ಘಟನೆ.
ಇದನ್ನೂ ನೋಡಿ | ನಿಮಗೆ ಗೊತ್ತಿಲ್ಲದ ಮಲೆಮಹದೇಶ್ವರ ಬೆಟ್ಟದ ಅಚ್ಚರಿಗಳು...
ನಗರದ ರಾಮನಗರ ನಿವಾಸಿ ಪರಿಮಳಾ ಎಂಬವರು ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿರುವ ‘ಸಿರುಗುಪ್ಪ ಎಜ್ಯುಕೇಶನ್ ಸೊಸೈಟಿ’ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ 1985ರಿಂದ 1996ರ ವರೆಗೆ ಸೇವೆ ಸಲ್ಲಿಸಿದ್ದರು. ಬಾಲ್ಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಈ ಶಿಕ್ಷಕಿ ಮದುವೆಯೂ ಆಗದೆ ಸೇವೆಯಿಂದ ನಿವೃತ್ತರಾದ ಬಳಿಕ ನಗರದಲ್ಲಿ ತಮ್ಮದೇ ಪುಟ್ಟದೊಂದು ಜಾಗದಲ್ಲಿ ಜೋಪಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದರು.