ಕಂದಾಚಾರ ಬಿಟ್ಹಾಕಿ: ಋತುಮತಿಯರನ್ನು ಮನೆಗೆ ಕಳುಹಿಸಿದ ಶಾಸಕಿ
2020 ವರ್ಷಕ್ಕೆ ಕಾಲಿರಿಸಿದ್ದೇವೆಯಾದರೂ, ಸಂಪ್ರದಾಯದ ಹೆಸರಿನಲ್ಲಿ ಮೌಢ್ಯತೆ ಇನ್ನೂ ಬಾಕಿ ಉಳಿದಿದೆ. ಅದರಲ್ಲಿ ಋತುಮತಿಯರನ್ನು ಮನೆಯಿಂದ ಹೊರಗಿಡುವ ಪದ್ದತಿ ಇನ್ನೂ ಜೀವಂತವಾಗಿದೆ.
ಚಿತ್ರದುರ್ಗ (ಜ.07): 2020 ವರ್ಷಕ್ಕೆ ಕಾಲಿರಿಸಿದ್ದೇವೆಯಾದರೂ, ಸಂಪ್ರದಾಯದ ಹೆಸರಿನಲ್ಲಿ ಮೌಢ್ಯತೆ ಇನ್ನೂ ಬಾಕಿ ಉಳಿದಿದೆ. ಅದರಲ್ಲಿ ಋತುಮತಿಯರನ್ನು ಮನೆಯಿಂದ ಹೊರಗಿಡುವ ಪದ್ದತಿ ಇನ್ನೂ ಜೀವಂತವಾಗಿದೆ.
ಚಿತ್ರದುರ್ಗದ ಗೊಲ್ಲರಹಟ್ಟಿಯಲ್ಲಿ ಈ ಕಂದಾಚಾರ ಈಗಲೂ ನಡೆಯುತ್ತಿರುವುದನ್ನು ಕಂಡು, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಲ್ಲಿಗೆ ಭೇಟಿ ನೀಡಿದರು.
ಇದನ್ನೂ ಓದಿ | ಮೆನ್‌ಸ್ಟ್ರುವಲ್ ಕಪ್‌ಯಿಂದ ಕಿರಿಕಿರಿಯಿಲ್ಲದ ಋತುಸ್ರಾವ?...
ಗುಡಿಸಲಿನಲ್ಲಿ ಇರಿಸಲಾಗಿದ್ದ ಋತುಮತಿ ಮಹಿಳೆಯರನ್ನು ಅವರವರ ಮನೆಗೆ ಕಳುಹಿಸಿದ ಶಾಸಕಿ, ಗ್ರಾಮಸ್ಥರಿಗೆ ಬುದ್ದಿವಾದ ಕೂಡಾ ಹೇಳಿದರು. ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ಶೋಷಣೆ ಮಾಡದಂತೆ ಗೊಲ್ಲರಹಟ್ಟಿಯ ನಿವಾಸಿಗಳಿಗೆ ಅರಿವು ಮೂಡಿಸಿದರು.