ತಿಗಳ ಜನಾಂಗದ ಬಗ್ಗೆ ಮಾತು: ಕ್ಷಮೆ ಕೇಳಿದ ಶಾಸಕ ಹ್ಯಾರಿಸ್
ಬೆಂಗಳೂರು ಕರಗದ ಬಗ್ಗೆ ವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಇಂದು ನಡೆಯಬೇಕಿದ್ದ ಸುದ್ದಿಗೋಷ್ಠಿ ರದ್ದು ಮಾಡಿ ವಹ್ನಿಕುಲ ಕ್ಷತ್ರಿಯ(ತಿಗಳ) ಜನಾಂಗದ ಕ್ಷಮೆಯನ್ನು ಶಾಸಕ ಹ್ಯಾರಿಸ್ ಕೇಳಿದ್ದಾರೆ.
ಬೆಂಗಳೂರು ಕರಗ ಕುರಿತು ಶಾಸಕ ಎನ್.ಎ.ಹ್ಯಾರಿಸ್ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಇಂದು ನಡೆಯಬೇಕಿದ್ದ ಸುದ್ದಿಗೋಷ್ಠಿ ರದ್ದು ಮಾಡಿ ವಹ್ನಿಕುಲ ಕ್ಷತ್ರಿಯ(ತಿಗಳ) ಜನಾಂಗದ ಕ್ಷಮೆಯನ್ನು ಶಾಸಕ ಹ್ಯಾರಿಸ್ ಕೇಳಿದ್ದಾರೆ. ಮಾತಿನ ಭರಾಟೆಯಲ್ಲಿ ಈ ರೀತಿ ಮಾತನಾಡಿದ್ದೇನೆ. ತನ್ನ ಮಾತಿನ ತಪ್ಪು ಅರಿವಾಗಿದೆ. ವಹ್ನಿಕುಲ ಕ್ಷತ್ರಿಯ,(ತಿಗಳ) ಸಮುದಾಯದ ಹಲವು ಸ್ನೇಹಿತರು ನನ್ನ ಅತ್ಮಿಯರು. ದಯವಿಟ್ಟು ವಹ್ನಿಕುಲ ಕ್ಷತ್ರಿಯ(ತಿಗಳ) ಸಮುದಾಯದ ಯಾರಿಗದ್ರು ಮನಸ್ಸು ನೋವಗಿದ್ರೆ ಕ್ಷಮೆ ಇರಲಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಶಾಸಕ ಹ್ಯಾರಿಸ್ ಕ್ಷಮೆಯಾಚಿಸಿದ್ದಾರೆ.