Asianet Suvarna News Asianet Suvarna News

Big3: ಹೆಚ್ಐವಿ ಪೀಡಿತರಿಗೆ 'ಆಪ್ತೆ' ಸವಿತಾ ಹೊನ್ನಕಟ್ಟಿ: 'ಕನ್ನಡ'ದ ಸೇವಕ ಡಾ. ವಿಜಯ್

ವಿಜಯಪುರ ನಗರದಲ್ಲಿ ಸವಿತಾ ಹೊನ್ನಕಟ್ಟಿ ಹಾಗೂ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿರುವ ಡಾ. ವಿಜಯ್ ವಿಶೇಷ ಸೇವೆ ಮಾಡುತ್ತಿದ್ದಾರೆ.
 

ವಿಜಯಪುರ ನಗರದಲ್ಲಿ ಸಂಕಲ್ಪ ಸಂಸ್ಥೆ ಅನ್ನೋ ಸಂಸ್ಥೆ ಕಟ್ಟಿಕೊಂಡು ಕಳೆದ 18 ವರ್ಷಗಳಿಂದ ಹೆಚ್ಐವಿ ಪೀಡಿತರಿಗೆ ಆಪ್ತ ಸಮಾಲೋಚನೆ ಮಾಡುತ್ತಿದ್ದಾರೆ ಸವಿತಾ ಹೊನ್ನಕಟ್ಟಿ. ಅವರು ಈವರೆಗೆ 8,900 ಹೆಚ್ಐವಿ ಪೀಡಿತರನ್ನ ಒಟ್ಟುಗೂಡಿಸಿ ಅವರನ್ನು ಧೈರ್ಯದಿಂದ ಬದುಕುವಂತೆ ಮಾಡಿದ್ದಾರೆ. ಇನ್ನು ಡಾ.ವಿಜಯ್ ರಾಘವ್ ರೆಡ್ಡಿ ಎಂಬ ವೈದ್ಯರು ವಿನೂತನ ರೀತಿಯಲ್ಲಿ ಸೇವೆಯ ಮೂಲಕ ಜನ ಮನ ಸೆಳೆದಿದ್ದಾರೆ. ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿರುವ ಬೆಸ್ಟ್ ಆಸ್ಪತ್ರೆ ಶ್ರೀಸಾಯಿ ಸ್ಪರ್ಶ್ ಆಸ್ಪತ್ರೆ. ಅಲ್ಲಿ ಕನ್ನಡ ಮಾತನಾಡಿರಿ, ಉಚಿತ ಚಿಕಿತ್ಸೆ ಪಡೆಯಿರಿ ಅನ್ನೋ ಕನ್ನಡ ಅಭಿಯಾನದ ಮಾಸಾಚರಣೆಗೆ ಆರಂಭಗೊಂಡಿದೆ. 60 ಹಾಸಿಗೆಗಳ ಆಸ್ಪತ್ರೆಯಲ್ಲಿ ಇದಕ್ಕಾಗಿಯೇ ಒಂದು ವಿಶೇಷ ವಾರ್ಡ್ ಪ್ರತಿ ವರ್ಷ ಮೀಸಲಿಟ್ಟು ಕಾರ್ಯ ನಿರ್ವಹಿಸುತ್ತಾರೆ.  ಆರೋಗ್ಯ ಸೇವೆ ಜೊತೆಗೆ ಕನ್ನಡದ ಸೇವೆಯನ್ನು ಮಾಡುತ್ತಿರುವ ವಿಶೇಷವಾದ ಅಭಿಮಾನವನ್ನು ವೈದ್ಯರಾದ ಡಾ. ವಿಜಯ್ ಅವರು ಮಾಡುತ್ತಿದ್ದಾರೆ.