Big 3 Hero: ಮಕ್ಕಳಿಗೆ ಉಚಿತ ಇಂಗ್ಲೀಷ್ ಪಾಠ: ಚಿತ್ರದುರ್ಗದ ಮಾದರಿ ಶಿಕ್ಷಕ ಯೋಗೇಶ್ ಸಹ್ಯಾದ್ರಿ
ಮಕ್ಕಳಿಗೆ ಉಚಿತವಾಗಿ ಇಂಗ್ಲೀಷ್ ಹೇಳಿ ಕೊಡುವ ಮೂಲಕ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಬೆಳಕಾಗಿದ್ದಾರೆ ಉಪನ್ಯಾಸಕ ಯೋಗೇಶ್ ಸಹ್ಯಾದ್ರಿ.
ಚಿತ್ರದುರ್ಗ: ಚಿತ್ರದುರ್ಗದ ಖಾಸಗಿ ಶಾಲೆಯೊಂದರಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಯೋಗೀಶ್ ಸಹ್ಯಾದ್ರಿ, ಬಿಡುವಿನ ಸಮಯದಲ್ಲಿ ಕಳೆದ 10 ವರ್ಷಗಳಿಂದ ಚಿತ್ರದುರ್ಗ ತಾಲ್ಲೂಕಿನ ಸ್ಲಂ ಏರಿಯಾಗಳು, ಹಿಂದುಳಿದ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಉಚಿತವಾಗಿ ಇಂಗ್ಲೀಷ್ ಕಲಿಸುವ ಮೂಲಕ ವಿನೂತನ ಅಭಿಯಾನ ಮಾಡ್ತಿದ್ದಾರೆ. ಈಗಾಗಲೇ ಸುಮಾರು 250ಕ್ಕೂ ಅಧಿಕ ಸರ್ಕಾರಿ ಶಾಲೆಗಳಿಗೆ ತೆರಳಿ ಉಚಿತ ಆಂಗ್ಲ ಭಾಷೆ ಬೋಧನೆ ಮಾಡಿದ್ದಾರೆ. ನಾನು ಕೂಡ ಗ್ರಾಮೀಣ ಭಾಗದಿಂದ ಬಂದಿರೋದ್ರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಇಂಗ್ಲೀಷ್ ಎಷ್ಟರ ಮಟ್ಟಿಗೆ ಕಷ್ಟ ಆಗಲಿದೆ ಎಂದು ನನಗೆ ಅರಿವಿದೆ. ಆ ಕಾರಣಕ್ಕಾಗಿ ಯಾವುದೇ ಸರ್ಕಾರಿ ಶಾಲೆಯ ಮಕ್ಕಳು ಇಂಗ್ಲೀಷ್ ಕಷ್ಟ ಎಂದು ಹೇಳಬಾರದು ಎಂಬ ಉದ್ದೇಶದಿಂದ ಈ ರೀತಿ ಪ್ರಯೋಗ ಮಾಡ್ತಿದ್ದೀನಿ. ನನ್ನ ಉಸಿರು ಇರುವವರೆಗೂ ಈ ಅಕ್ಷರದ ಸೇವೆ ಮಾಡ್ತೀನಿ. ಇಂಗ್ಲೀಷ್ ಜ್ಞಾನವನ್ನು ಸರ್ಕಾರಿ ಶಾಲಾ ಮಕ್ಕಳಿಗಾಗಿ ಮುಡಿಪು ಇಡ್ತೀನಿ ಅಂತಿದ್ದಾರೆ ಯೋಗೀಶ್.