ಆರೋಗ್ಯ ಸಚಿವರೇ ಇಲ್ನೋಡಿ, ಹೆರಿಗೆಗೆ ಬಸ್‌ ನಿಲ್ದಾಣವೇ ಗತಿ!?

ಬಸ್‌ ನಿಲ್ದಾಣದಲ್ಲೇ ಹೆರಿಗೆ| ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ನಡೆದ ಘಟನೆ| ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದ ಗರ್ಣಿಣಿ| ಒಂದು ಘಂಟೆ ಕಾದರೂ ಬಾರದ ಬಸ್| 

First Published Jan 1, 2020, 4:20 PM IST | Last Updated Jan 1, 2020, 4:20 PM IST

ವಿಜಯಪುರ(ಜ.01): ಬಸ್‌ಗಾಗಿ ಕಾಯುವಾಗ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಪಾರಿಣಾಮ ನಿಲ್ದಾಣದಲ್ಲೇ ಹೆರಿಗೆಯಾದ ಘಟನೆ ಜಿಲ್ಲೆ ನಿಡಗುಂದಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಇಂದು(ಬುಧವಾರ) ನಡೆದದೆ. ಬಸವನ ಬಾಗೇವಾಡಿಯ ಮಹಾದೇವಿ ಹಣಮಂತ ವಡ್ಡರ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಹೋಗಲು ನಿಡಗುಂದಿ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. 

ಸುಮಾರು ಒಂದು ಗಂಟೆಯಿಂದ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯ್ದರೂ ಬಸ್‌ ಬಂದಿರಲಿಲ್ಲ. ಈ ವೇಳೆ ತೀವ್ರವಾದ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಸ್ಥಳೀಯರ ಸಹಾಯದಿಂದ ಮಹಾದೇವಿಗೆ ಹೆರಿಗೆ ಮಾಡಿಸಿದ್ದಾರೆ. ಮಹಾದೇವಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ಬಳಿಕ ತಾಯಿ-ಮಗು ಆರೋಗ್ಯದಿಂದ ಇದ್ದಾರೆ.