Mangaluru : ಸಂಜೆ ಬಾಲಕಿ ನಾಪತ್ತೆ, ರಾತ್ರಿ ಚರಂಡಿಯಲ್ಲಿ ಶವವಾಗಿ ಪತ್ತೆ, ಕೊಲೆ ಶಂಕೆ

ಮಂಗಳೂರು ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಪರಾರಿ ಎಂಬಲ್ಲಿ  ಚರಂಡಿಯಲ್ಲಿ ಎಂಟು ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಬಾಲಕಿ ಕೊಲೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 

First Published Nov 22, 2021, 10:57 AM IST | Last Updated Nov 22, 2021, 10:57 AM IST

ಮಂಗಳೂರು (ನ. 22):  ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಪರಾರಿ ಎಂಬಲ್ಲಿ  ಚರಂಡಿಯಲ್ಲಿ (Drainage) ಎಂಟು ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಬಾಲಕಿ ಕೊಲೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 

Suvarna FIR : ದಾವಣಗೆರೆಯಲ್ಲೊಬ್ಬಳು, ಬಳ್ಳಾರಿಯಲ್ಲೊಬ್ಬಳು..ಕೈಗೆ ಮಗು ಕೊಟ್ಟ ಉಮೇಶ!

ಪರಾರಿಯಲ್ಲಿರುವ ಟೈಲ್ಸ್‌ ಫ್ಯಾಕ್ಟರಿಯೊಂದರಲ್ಲಿ 30ಕ್ಕೂ ಅಧಿಕ ಮಂದಿ ಕೆಲಸ ಮಾಡಿಕೊಂಡಿದ್ದಾರೆ. ಈ ಪೈಕಿ 20 ಮಂದಿ ಉತ್ತರ ಪ್ರದೇಶದವರು ಮತ್ತು 10 ಮಂದಿ ಕರ್ನಾಟಕದವರಾಗಿದ್ದಾರೆ. ಇಲ್ಲಿಯೇ ಕೆಲಸ ಮಾಡಿಕೊಂಡಿದ್ದ ಕಾರ್ಮಿಕ ದಂಪತಿಯ ಎಂಟು ವರ್ಷದ ಬಾಲಕಿ ಅಲ್ಲಿಯೇ ಆಟವಾಡಿಕೊಂಡಿದ್ದಳು. ಭಾನುವಾರ ಸಂಜೆ 4 ಗಂಟೆಯ ಬಳಿಕ ಕಣ್ಮರೆಯಾಗಿದ್ದಳು. ಬಳಿಕ ಹುಡುಕಾಡಿದಾಗ ಟೈಲ್ಸ್‌ ಫ್ಯಾಕ್ಟರಿಯ ಬಳಿಯ ಡ್ರೈನೇಜ್‌ನಲ್ಲಿ ಬಾಲಕಿ ಶವ ಪತ್ತೆಯಾಗಿದೆ. ಬಾಲಕಿಯ ಕುಟುಂಬಸ್ಥರು ಇದು ಕೊಲೆ ಇರಬಹುದು ಎಂಬ ಶಂಕೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಟೈಲ್ಸ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ 19 ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.