Asianet Suvarna News Asianet Suvarna News

ಮಂಡ್ಯ; ಎತ್ತುಗಳಾದ ಮೊಮ್ಮಕ್ಕಳು... ತಾತನಿಗೆ ಹೆಣ್ಣುಮಕ್ಕಳ ಸಾಥ್!

Sep 15, 2021, 10:04 PM IST

ಮಂಡ್ಯ(ಸೆ. 15) ಬಡತನವಿದ್ದರೂ ಇವರ ಕೃಷಿ ಮಾಡುವ ಶಕ್ತಿಗೆ ಬಡತನವಿಲ್ಲ.  ಮನೆಯಲ್ಲಿ ಬಡತನ, ಎತ್ತು ಖರೀದಿಸಲಾಗದ ಸ್ಥಿತಿ ಹಿನ್ನೆಲೆ, ಕೂಲಿ ಆಳುಗಳಿಗೆ ನೀಡಲು ಹಣವಿಲ್ಲದೇ‌ ಪರದಾಡುತ್ತಿದ್ದ ರೈತನಿಗೆ  ಮೊಮ್ಮಕ್ಕಳೆ ಎತ್ತುಗಳಾಗಿದ್ದಾರೆ. ಹಣ್ಣು ಮಕ್ಕಳು ತಾವೇ ಗದ್ದೆ ಉಳುಮೆ ಮಾಡಿದ್ದಾರೆ.

ಹತ್ತು ಗಂಟೆಯಲ್ಲಿ ಇಪ್ಪತ್ತು ಎಕರೆ ಉಳುಮೆ ಮಾಡಿ ದಾಖಲೆ

ತಾತನ ಸಹಾಯಕ್ಕೆ ಸೊಸೆ ಸಂಗೀತ ಹಾಗೂ ಮೊಮ್ಮಕ್ಕಳಾದ ವರ್ಷಿತಾ, ಅಂಕಿತ  ನಿಂತಿದ್ದಾರೆ. ಕಾಲೇಜು ಬಿಡುವಿನ ಸಮಯದಲ್ಲಿ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ತಮ್ಮ 1.5 ಎಕರೆ ಜಮೀನಿನಲ್ಲಿ ರಾಗಿ ಬೆಳೆ ಬೆಳೆಯುತ್ತಿರುವ ಕುಟುಂಬಕ್ಕೆ ತಾವೇ ಎತ್ತುಗಳಾಗಿದ್ದಾರೆ. ಸಣ್ಣಸ್ವಾಮಿ ಬೆನ್ನಿಗೆ ನಿಂತ ಮೊಮ್ಮಕ್ಕಳೆ ಉಳುಮೆ ಮಾಡಿ ಮುಗಿಸಿದ್ದಾರೆ. 

Video Top Stories