ಮೈಕೊರೆಯುವ ಚಳಿಗೆ ವಿಜಯಪುರ ಗಢ ಗಢ: ದಾಖಲಾಯ್ತು ಅತಿ ಕಡಿಮೆ ಉಷ್ಣಾಂಶ

ಮೈಕೊರೆಯುವ ಚಳಿಗೆ ಗುಮ್ಮಟನಗರಿ ವಿಜಯಪುರ ಗಢಗಢ ನಡುಗುತ್ತಿದೆ. ಹೌದು, ವಿಜಯಪುರದಲ್ಲಿ ಅತೀ ಕಡಿಮೆ ಉಷ್ಣಾಂಶ ದಾಖಲಾಗಿದೆ. ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಏಕಾಏಕಿ ತಾಪಮಾನ ಕುಸಿದಿದೆ. ವಿಜಯಪುರ, ಬೀದರ್‌ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕುಸಿದ ತಾಪಮಾನ. 

First Published Jan 12, 2023, 11:04 AM IST | Last Updated Jan 12, 2023, 11:06 AM IST

ವಿಜಯಪುರ(ಜ.12): ಮೈಕೊರೆಯುವ ಚಳಿಗೆ ಗುಮ್ಮಟನಗರಿ ವಿಜಯಪುರ ಗಢಗಢ ನಡುಗುತ್ತಿದೆ. ಹೌದು, ವಿಜಯಪುರದಲ್ಲಿ ಅತೀ ಕಡಿಮೆ ಉಷ್ಣಾಂಶ ದಾಖಲಾಗಿದೆ. ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಏಕಾಏಕಿ ತಾಪಮಾನ ಕುಸಿದಿದೆ. ವಿಜಯಪುರ, ಬೀದರ್‌ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ತಾಪಮಾನ ಕುಸಿದಿದೆ. ಇದರಿಂದ ಈ ಮೂರು ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗಿದೆ. ಕಳೆದ 10 ವರ್ಷಗಳಲ್ಲೇ ಅತೀ ಕಡಿಮೆ ತಾಪಮಾನ ದಾಖಲಾಗಿದೆ. ವಿಜಯಪುರದಲ್ಲಿ 6.5 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಇಳಿದಿದೆ. ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತಾಪಮಾನ ಕುಸಿಯುವ ಸಾಧ್ಯತೆ ಇದೆ. 

ಗದಗ: ಬೂತ್‌ ವಿಜಯ ಅಭಿಯಾನಕ್ಕೆ ತೆರಳಿದ್ದ ಶಾಸಕ ಲಮಾಣಿ ವಿರುದ್ಧ ಸಿಡಿದೆದ್ದ ಜನ!