ಗದಗ: ಬೂತ್‌ ವಿಜಯ ಅಭಿಯಾನಕ್ಕೆ ತೆರಳಿದ್ದ ಶಾಸಕ ಲಮಾಣಿ ವಿರುದ್ಧ ಸಿಡಿದೆದ್ದ ಜನ!

ಬಿಜೆಪಿ ಶಾಸಕ ರಾಮಪ್ಪ ಲಮಾಣಿ ವಿರುದ್ಧ ಸಿಡಿದೆದ್ದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಕರಿಗೌರಿ ಆಶ್ರಯ ಬಡಾವಣೆಯ ನಿವಾಸಿಗಳು, ಮೂಲಭೂತ ಸೌಕರ್ಯ ನೀಡುವಂತೆ ಒತ್ತಾಯಿಸಿ ಶಾಸಕರಿಗೆ ಘೇರಾವ್‌. 

First Published Jan 12, 2023, 10:01 AM IST | Last Updated Jan 12, 2023, 10:01 AM IST

ಗದಗ(ಜ.12): ಬೂತ್‌ ವಿಜಯ ಅಭಿಯಾನಕ್ಕೆ ತೆರಳಿದ್ದ ಬಿಜೆಪಿ ಶಾಸಕ ರಾಮಪ್ಪ ಲಮಾಣಿಗೆ ಜನತೆ ಘೇರಾವ್‌ ಹಾಕಿದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಕರಿಗೌರಿ ಆಶ್ರಯ ಬಡಾವಣೆಯ ನಿವಾಸಿಗಳು ಬಿಜೆಪಿ ಶಾಸಕ ರಾಮಪ್ಪ ಲಮಾಣಿ ವಿರುದ್ಧ ಸಿಡಿದೆದ್ದಿದ್ದಾರೆ. ಮೂಲಭೂತ ಸೌಕರ್ಯ ನೀಡುವಂತೆ ಒತ್ತಾಯಿಸಿ ಶಾಸಕರಿಗೆ ಘೇರಾವ್‌ ಹಾಕಿದ್ದಾರೆ. ಇದೇ ವೇಳೆ ಬಡಾವಣೆಯ ನಿವಾಸಿಗಳು ಹಾಗೂ ಶಾಸಕ ರಾಮಪ್ಪ ಲಮಾಣಿ ನಡುವೆ ಮಾತಿನ ಚಕಮಕಿ ನಡೆದಿದೆ. ಜನತೆಗೆ ಆಗ್ರಹಕ್ಕೆ ಮಣಿದ ಶಾಸಕ ರಾಮಪ್ಪ ಲಮಾಣಿ ಈಗ ಅನುದಾನ ಬರೋದಿಲ್ಲ, ಮುಂದೇ ನಾನೇ ಗೆದ್ದರೆ ಕೆಲಸ ಮಾಡುವೆ, ನನಗಿಂತ ಚೆನ್ನಾಗಿರೋ ಎಂಎಲ್‌ಎ ಬಂದರೆ ಅವನೇ ಕೆಲಸ ಮಾಡುತ್ತಾನೆ ಅಂತ ಹೇಳಿದ್ದಾರೆ. 

Party Rounds: ವಿಶ್ವನಾಥ್‌ ಕಾಂಗ್ರೆಸ್‌ ಸೇರ್ಪಡೆ, ಸಿದ್ದು- ನಾನು ವೈರಿಯಲ್ಲ ಎಂದ ಹಳ್ಳಿಹಕ್ಕಿ