Asianet Suvarna News Asianet Suvarna News

ಅಂಕೋಲಾ; ಲೇಡಿ ಕಂಡಕ್ಟರ್ ಮತ್ತು ಮಹಿಳೆ ನಡುವೆ 'ಜುಟ್ಟು' ಫೈಟ್

Sep 12, 2021, 7:18 PM IST

ಅಂಕೋಲಾ(ಸೆ. 12) ಕ್ಷುಲ್ಲಕ ಕಾರಣಕ್ಕೆ ಮಹಿಳಾ ಕಂಡಕ್ಟರ್ ಹಾಗೂ ಪ್ರಯಾಣಿಕ ಮಹಿಳೆಯೋರ್ವಳು ಬಸ್ ನಿಲ್ದಾಣದಲ್ಲೇ ಹೊಡೆದಾಡಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಸ್ ನಿಲ್ದಾಣದಲ್ಲಿ ನಡೆದ ಘಟನೆ ವಿಡಿಯೋ ವೈರಲ್ ಆಗಿದೆ.

ಬಸ್‌ನಲ್ಲಿ ಹಣ ಕೊಡುವ ಹಾಗೂ ತೆಗೆದುಕೊಳ್ಳುವ ವಿಚಾರ ಸಂಬಂಧಿಸಿ ಮಹಿಳಾ ಕಂಡಕ್ಟರ್ ಹಾಗೂ ಪ್ರಯಾಣಿಕ ಮಹಿಳೆಯ ನಡುವೆ ಮಾತಿಗೆ ಮಾತು ಬೆಳೆದಿದ್ದು, ಅಂಕೋಲಾ ಬಸ್ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೇ ಅವಾಚ್ಯ ಶಬ್ದಗಳಿಂದ ಬೈದುಕೊಳ್ಳುತ್ತಾ ಜುಟ್ಟು ಹಿಡಿದು ಎಳೆದಾಡಿಕೊಂಡಿದ್ದಾರೆ.

ಖಾಲಿ ನಿವೇಶನಕ್ಕಾಗಿ ಈ ಪರಿ ಕಿತ್ತಾಡಿಕೊಂಡ್ರಾ ಮಹಿಳೆಯರು

ಮಹಿಳೆಯರ ಜುಟ್ಟು ಫೈಟ್ ಪ್ರಾರಂಭವಾಗುತ್ತಿದ್ದಂತೇ ಪ್ರಯಾಣಿಕ ಮಹಿಳೆಯ ಗಂಡ ಒಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಘಟನೆಯನ್ನು ರೆಕಾರ್ಡ್ ಮಾಡಿದ ಬಳಿಕ ಗಲಾಟೆಯನ್ನು ಬಿಡಿಸಲು ಪ್ರಯತ್ನ ನಡೆಸಿದ್ದಾನೆ. ಈ ವೇಳೆ ಉಳಿದ ಸಾರಿಗೆ ಸಿಬ್ಬಂದಿ ಸ್ಥಳಕ್ಕೆ ತೆರಳುತ್ತಿದ್ದಂತೇ ಮಹಿಳೆಯರಿಬ್ಬರು ತಾವು ಹಿಡಿದುಕೊಂಡಿದ್ದ ಕೂದಲನ್ನು  ಬಿಟ್ಟು ಮತ್ತೆ ಅವಾಚ್ಯ ಶಬ್ದಗಳಿಂದ ಬೈದುಕೊಂಡಿದ್ದಾರೆ.  ಅಂತೂ ಇಂತೂ ಸಾರಿಗೆ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಗಲಾಟೆಯನ್ನು ಶಾಂತಗೊಳಿಸಿ ಮಹಿಳೆಯರಿಬ್ಬರನ್ನು ಕಳುಹಿಸಿದ್ದಾರೆ.