Asianet Suvarna News Asianet Suvarna News

ಮಹಿಳಾ ಪೊಲೀಸ್‌ ಪೇದೆಗೂ ಅಂಟಿದ ಕೊರೋನಾ..!

ಕೊಪ್ಪಳದಲ್ಲಿ ಸೆಂಟ್ರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆಗೆ ಸೋಂಕು ವಕ್ಕರಿಸಿದ ರೀತಿಯೇ ಅಚ್ಚರಿಯಾಗಿದೆ. ಪೊಲೀಸ್ ರೈಫಲ್ಸ್‌ನಿಂದಲೂ ಕೊರೋನಾ ಹರಡುತ್ತಾ ಎನ್ನುವ ಅನುಮಾನ ಶುರುವಾಗಿದೆ.

ಕೊಪ್ಪಳ(ಜು.10): ಕೊರೋನಾ ವಾರಿಯರ್ಸ್‌ಗಳಿಗೆ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಕೊರೋನಾಗೆ ಮೊದಲ ಟಾರ್ಗೆಟ್ ಆಗಿದ್ದಾರೆ. ಇದೀಗ ಕೊಪ್ಪಳದ ಮಹಿಳಾ ಪೇದೆಗೂ ಕೊರೋನಾ ಸೋಂಕು ವಕ್ಕರಿಸಿದೆ.

ಆದರೆ ಕೊಪ್ಪಳದಲ್ಲಿ ಸೆಂಟ್ರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆಗೆ ಸೋಂಕು ವಕ್ಕರಿಸಿದ ರೀತಿಯೇ ಅಚ್ಚರಿಯಾಗಿದೆ. ಪೊಲೀಸ್ ರೈಫಲ್ಸ್‌ನಿಂದಲೂ ಕೊರೋನಾ ಹರಡುತ್ತಾ ಎನ್ನುವ ಅನುಮಾನ ಶುರುವಾಗಿದೆ.

ಕೊರೋನಾ ನಡುವೆ ವೇಶ್ಯಾವಾಟಿಕೆ ಅವ್ಯಾಹತ..!

ಕೊಪ್ಪಳ ನಗರ ಠಾಣೆಯ ಸೆಂಟ್ರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಜುಲೈ 01ರಂದ ಸ್ಟೇಷನ್‌ನಲ್ಲಿ ಮಹಿಳಾ ಕಾನ್ಸ್‌ಟೇಬಲ್ ಕಾರ್ಯನಿರ್ವಹಿಸಿದ್ದರು. 8 ಗಂಟೆ ರೈಫಲ್ಸ್ ಹಿಡಿದು ನಿಂತಿದ್ದರಿಂದಲೇ ಕೊರೋನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಬಲವಾದ ಕಾರಣವೂ ಇದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..
 

Video Top Stories