Asianet Suvarna News Asianet Suvarna News

ಒಂದೆಡೆ ಬರ, ಮತ್ತೊಂದೆಡೆ ಲೋಡ್ ಶೆಡ್ಡಿಂಗ್: ಬೆಳೆದ ಆಲೂಗಡ್ಡೆ ಬೆಳೆಯಲ್ಲಿ ಫಸಲೇ ಮಾಯ..!

ಮಳೆರಾಯ ಕೈ ಕೊಟ್ಟು ಇಡೀ ಜಿಲ್ಲೆ ಬರಗಾಲಕ್ಕೆ ತುತ್ತಾಗಿದೆ. ರೈತರ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಇಲ್ಲ. ಲೋಡ್ ಶೆಡ್ಡಿಂಗ್ನಿಂದ ಇರೋ ಬೆಳೆಗೆ ನೀರು ಹಾಯಿಸೋಕಾಗ್ತಿಲ್ಲ. ಸಾಲು ಸಾಲು ಸಮಸ್ಯೆಗಳ ನಡುವೆ, ಅನ್ನದಾತನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
 

ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಆಲೂಗಡ್ಡೆ ಬೆಳೆ(potato crops), ಫಸಲೇ ಬಾರದ ಆಲೂಗಡ್ಡೆ ಬೆಳೆ ನಾಶ ಮಾಡುತ್ತಿರುವ ರೈತರು(farmers), ವಿಜ್ಞಾನಿಗಳೊಂದಿಗೆ ತೋಟಗಳಲ್ಲಿ ಪರಿಶೀಲನೆ ನಡೆಸುತ್ತಿರುವ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್.. ಈ ಎಲ್ಲಾ ದೃಶ್ಯಗಳು  ಕಂಡು ಬಂದಿದ್ದು ಕೋಲಾರ ಜಿಲ್ಲೆ ಮುಳಬಾಗಿಲು ತಾಲುಕು ಸೀಗೇಹಳ್ಳಿ ಗ್ರಾಮದಲ್ಲಿ. ಕೋಲಾರ(Kolar) ಜಿಲ್ಲೆಯ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಆಲೂಗಡ್ಡೆ ಬೆಳೆ ಬೆಳೆದಿದ್ದಾರೆ. ಆದರೆ ರೈತರು ಬೆಳೆದಿರುವ ಆಲೂಗಡ್ಡೆ ಬೆಳೆ 2 ತಿಂಗಳು ಕಳೆದರೂ ಫಸಲೇ ಬಂದಿಲ್ಲ, ಗಿಡಗಳು ಮೇಲ್ನೋಟಕ್ಕೆ ಚೆನ್ನಾಗಿ ಬೆಳೆದಿದೆ, ಆದರೆ ಗಿಡಗಳಲ್ಲಿ ಗಡ್ಡೆ ಕಟ್ಟಿಲ್ಲ. ಕಳಪೆ ಗುಣಮಟ್ಟದ ಬಿತ್ತನೆ ಆಲೂಗಡ್ಡೆಯ ಪರಿಣಾಮವೋ, ಇಲ್ಲಾ ವಾತಾವರಣದ ಪರಿಣಾಮವೋ ಗೊತ್ತಿಲ್ಲ. ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಆಲೂಗಡ್ಡೆ ಸಂಪೂರ್ಣವಾಗಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಒಂದೆಡೆ ಬರ, ಮತ್ತೊಂದೆಡೆ ಲೋಡ್ ಶೆಡ್ಡಿಂಗ್, ಇಂಥ ಹತ್ತಾರು ಸವಾಲುಗಳನ್ನು ಮೆಟ್ಟಿನಿಂತು, ಲಕ್ಷಾಂತರ ಖರ್ಚು ಮಾಡಿ ಆಲೂಗೆಡ್ಡೆ ಬೆಳೆದರೂ ಫಸಲು ಕೈ ಸೇರುತ್ತಿಲ್ಲ.ಆಲೂಗಡ್ಡೆ ಬಳೆ ಕಯಕೊಟ್ಟಿದ್ಯಾಕೆ ಎಂದು ಕಾರಣ ಹುಡುಕಲು ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್, ತೋಟಗಾರಿಕಾ ವಿಜ್ಞಾನಿಗಳೊಂದಿಗೆ ಜಮೀನಿಗೆ ಭೇಟಿ ನೀಡಿದ್ರು. .ವಿಜ್ಞಾನಿಗಳು ಪರಿಶೀಲನೆ ಕೂಡ ನಡೆಸಿದ್ದಾರೆ. ಜಿಲ್ಲೆಯಲ್ಲಿ ರೈತರು ಬೆಳೆದಿರುವ ಯಾವುದೇ ಬೆಳೆಗಳು ಕೈಹಿಡಿಯುತ್ತಿಲ್ಲ ಈ ಕುರಿತು ಸರ್ಕಾರ ಪರಿಶೀಲನೆ ನಡೆಸಬೇಕು, ಈಗ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡಬೇಕೆಂದು ಶಾಸಕ ಸಮೃದ್ದಿ ಮಂಜುನಾಥ್ ಮನವಿ ಮಾಡಿದ್ದಾರೆ. ಸದ್ಯ ತೋಟಗಳಲ್ಲಿನ ಮಾದರಿ ಸಂಗ್ರಹ ಮಾಡಲಾಗಿದ್ದು ಈಕುರಿತು ಪರೀಶಿಲಿಸಿ ವರದಿ ನೀಡುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ .

ಇದನ್ನೂ ವೀಕ್ಷಿಸಿ:  ಬರ ಘೋಷಣೆಯಾದ್ರೂ ಸಿಕ್ಕಿಲ್ಲ ಪರಿಹಾರ: ಜಾನುವಾರುಗಳೊಂದಿಗೆ ಗುಳೆ ಹೊರಟ ಜನ

Video Top Stories