Asianet Suvarna News Asianet Suvarna News

ಬಚ್ಚಲು ಮನೆಯಲ್ಲಿ ಅವಿತುಕೊಂಡಿದ್ದು ಕಾಳಿಂಗ ಸರ್ಪ, ಸುರಕ್ಷಿತವಾಗಿ ಅರಣ್ಯ ಸೇರ್ಕೊಂಡ್ತಪ್ಪಾ...!

ಕಾಡಿನಿಂದ ಆಹಾರ ಅರಸುತ್ತ ನಾಡಿಗೆ ನುಗ್ಗಿದ ಸುಮಾರು 14 ಅಡಿ ಉದ್ದದ 9 ಕೆ.ಜಿ. ತೂಕದ ಕಾಳಿಂಗ ಸರ್ಪವೊಂದು ಕಾರವಾರ ತಾಲೂಕಿನ ಉಳ್ಳೂರಮಠದ ಮನೆಯೊಂದರ ಬಚ್ಚಲುಮನೆಯಲ್ಲಿ ಸೇರಿಕೊಂಡಿತ್ತು. ಈ ವೇಳೆ ಬಚ್ಚಲು ಮನೆಗೆ ತೆರಳಿದ ಮನೆಯವರು ಹೆಡೆ ಎತ್ತಿ ನಿಂತಿದ್ದ ಕಾಳಿಂಗ ಸರ್ಪವನ್ನು ಕಂಡು ಹೌಹಾರಿದ್ದಾರೆ.  

ಕಾರವಾರ (ಜ. 09): ಕಾಡಿನಿಂದ ಆಹಾರ ಅರಸುತ್ತ ನಾಡಿಗೆ ನುಗ್ಗಿದ ಸುಮಾರು 14 ಅಡಿ ಉದ್ದದ 9 ಕೆ.ಜಿ. ತೂಕದ ಕಾಳಿಂಗ ಸರ್ಪವೊಂದು ತಾಲೂಕಿನ ಉಳ್ಳೂರಮಠದ ಮನೆಯೊಂದರ ಬಚ್ಚಲುಮನೆಯಲ್ಲಿ ಸೇರಿಕೊಂಡಿತ್ತು. ಈ ವೇಳೆ ಬಚ್ಚಲು ಮನೆಗೆ ತೆರಳಿದ ಮನೆಯವರು ಹೆಡೆ ಎತ್ತಿ ನಿಂತಿದ್ದ ಕಾಳಿಂಗ ಸರ್ಪವನ್ನು ಕಂಡು ಹೌಹಾರಿದ್ದಾರೆ.  ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸಾರ್ಥಕ ಬರ್ತ್‌ಡೇ ಆಚರಿಸಿಕೊಂಡ ವಿಜಯಪುರದ ಯುವಕ..!

ಬಳಿಕ ಉರಗತಜ್ಞ ಪವನ ನಾಯ್ಕ ಅವರೊಂದಿಗೆ ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯಧಿಕಾರಿಗಳು ಹಾವನ್ನು ನೋಡಿದಾಗ ಅದು ಕಾಳಿಂಗ ಸರ್ಪ ಎಂಬುದು ಗೊತ್ತಾಗಿದೆ. ಬಳಿಕ ಪವನ ನಾಯ್ಕ  ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಅದನ್ನು ರಕ್ಷಣೆ ಮಾಡಿದರು. ರಕ್ಷಿಸಿದ ಕಾಳಿಂಗ ಸರ್ಪವನ್ನು ಜನವಸತಿ ಇಲ್ಲದಿರುವ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.

Video Top Stories