ಕೊಪ್ಪಳದಲ್ಲಿ ಪ್ರವಾಹ ಭೀತಿ; ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದಾಗ ಆಯತಪ್ಪಿ ಹಳ್ಳಕ್ಕೆ ಬಿದ್ದ ಯುವಕ

ಕೊಪ್ಪಳದಲ್ಲಿ ವರುಣರಾಯನ ಆರ್ಭಟ ಜೋರಾಗಿದೆ. ಇಲ್ಲಿನ ಆಳವಂಡಿ ಗ್ರಾಮದಲ್ಲಿ ಪ್ರವಾಹ ಭೀತಿ ಎದುರಾಗಿದೆ. ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳದ ದಾರಿ ಬಿಟ್ಟರೆ ಬೇರೆ ದಾರಿ ಇಲ್ಲದೇ ಯುವಕನೊಬ್ಬ ಮಗು ಎತ್ತಿಕೊಂಡು ಹೋಗುವಾಗ ಆಯತಪ್ಪಿ ಬಿದ್ದಿದ್ದಾನೆ. 

First Published Oct 2, 2020, 9:35 AM IST | Last Updated Oct 2, 2020, 9:44 AM IST

ಬೆಂಗಳೂರು (ಅ.02): ಕೊಪ್ಪಳದಲ್ಲಿ ವರುಣರಾಯನ ಆರ್ಭಟ ಜೋರಾಗಿದೆ. ಇಲ್ಲಿನ ಆಳವಂಡಿ ಗ್ರಾಮದಲ್ಲಿ ಪ್ರವಾಹ ಭೀತಿ ಎದುರಾಗಿದೆ. ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳದ ದಾರಿ ಬಿಟ್ಟರೆ ಬೇರೆ ದಾರಿ ಇಲ್ಲದೇ ಯುವಕನೊಬ್ಬ ಮಗು ಎತ್ತಿಕೊಂಡು ಹೋಗುವಾಗ ಆಯತಪ್ಪಿ ಬಿದ್ದಿದ್ದಾನೆ.  ಇದು ಕೊಪ್ಪಳದ ಕಥೆಯಾದರೆ ರಾಯಚೂರು ಕೂಡಾ ಭಿನ್ನವಾಗಿಲ್ಲ. ಗೊಬ್ಬರ ಸಾಗಿಸುತ್ತಿದ್ದಾಗ ಎತ್ತುಗಳ ಸಮೇತ ಬಂಡಿ ಕೊಚ್ಚಿ ಹೋಗಿದೆ. ಅದೃಷ್ಟವಶಾತ್ ನಾಲ್ಕು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ರಾಜ್ಯದ ಮೂರು ಜಿಲ್ಲೆಗಳಲ್ಲಿ ಮಳೆ ಅಬ್ಬರ