Bagalkot| ಕರವೇಯಿಂದ ಬೂಟ್ ಪಾಲಿಷ್ ಚಳುವಳಿ

*  ಬೂಟ್ ಪಾಲಿಷ್‌ ಮಾಡಿದ ಅಧಿಕಾರಿಗಳಿಂದ ದೇಣಿಗೆ ಸಂಗ್ರಹಿಸಿದ ಕರವೇ ಕಾರ್ಯಕರ್ತರು
*  ಶೂ ಪಾಲಿಷ್ ಮಾಡಿ ಹಣ ಸಂಗ್ರಹಿಸುವ ಮೂಲಕ ಸರ್ಕಾರಕ್ಕೆ ತಿರುಗೇಟು ನೀಡಿದ ಕರವೇ 
*  ಶೂ ಪಾಲಿಷ್‌ ಮಾಡಿಸಿಕೊಂಡು ಹಣ ನೀಡಿದ ತಹಶೀಲ್ದಾರ್‌

First Published Nov 11, 2021, 2:48 PM IST | Last Updated Nov 11, 2021, 2:48 PM IST

ಬಾಗಲಕೋಟೆ(ನ.11):  ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅನುದಾನ ನೀಡದ ಸರ್ಕಾರದ ವಿರುದ್ಧ ಕರವೇ ಬೂಟ್ ಪಾಲಿಷ್ ಚಳುವಳಿಯನ್ನ ಮಾಡಿದೆ. ಹೌದು, ಇಂದು ನವನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬೂಟ್ ಪಾಲಿಷ್ ಚಳುವಳಿಯನ್ನ ಕರವೇ ಹಮ್ಮಿಕೊಂಡಿತ್ತು. ತಹಶೀಲ್ದಾರ್‌ ಸೇರಿದಂತೆ ಕಚೇರಿಗೆ ಬರುವ ಅಧಿಕಾರಿಗಳನ್ನ ತಡೆದು ಕಾಲಿಗೆ ಬಿದ್ದು ಕರವೇ ಕಾರ್ಯಕರ್ತರು ಬೂಟ್ ಪಾಲಿಷ್ ಮಾಡಿದ್ದಾರೆ. ಬೂಟ್ ಪಾಲಿಷ್‌ ಮಾಡಿದ ಕರವೇ ಕಾರ್ಯಕರ್ತರು ಅಧಿಕಾರಿಗಳಿಂದ ದೇಣಿಗೆಯನ್ನ ಸಂಗ್ರಹಿಸಿದ್ದಾರೆ. 

ಮಚ್ಚೆ-ಹಲಗಾ ಬೈಪಾಸ್‌ ರಸ್ತೆಗೆ ವಿರೋಧ: ಮಹಿಳೆಯರನ್ನು ಎಳೆದಾಡಿ, ಸೀರೆ ಹರಿದು ಹಾಕಿದ ಪೊಲೀಸರು

ಹಣ ಇಲ್ಲ ಎಂದು ಕಾರ್ಯಾರಂಭ ಮಾಡದ ಸರ್ಕಾರದ ನಿಲುವು ಖಂಡಿಸಿ ಕರವೇ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನವನ್ನ ಮಾಡಿದ್ದಾರೆ. ಜಿಲ್ಲಾಡಳಿತ ಭವನದ‌ ಮುಂಭಾಗ ಶೂ ಪಾಲಿಷ್ ಮಾಡುವ ಮೂಲಕ ಹಣ ಸಂಗ್ರಹಿಸಿದ್ದಾರೆ. ಕಚೇರಿಗೆ ಆಗಮಿಸುವ ಅಧಿಕಾರಿಗಳಿಗೆ ಶೂ ಪಾಲಿಷ್ ಮಾಡಿಸುವಂತೆ ಕರವೇ ಕಾರ್ಯಕರ್ತರ ಮನವಿ ಮಾಡಿದ್ದಾರೆ. ಶೂ ಪಾಲಿಷ್‌ನಿಂದ ಬಂದ‌ ಹಣವನ್ನು ಸಂಗ್ರಹಿಸಿ ಸರ್ಕಾರಕ್ಕೆ‌ ನೀಡಲು ಕರವೇ ಕಾರ್ಯಕರ್ತರು ತೀರ್ಮಾನಿಸಿದ್ದಾರೆ. ಹಣ ಇಲ್ಲ ಎನ್ನುತ್ತಿರುವ ರಾಜ್ಯ ಸರ್ಕಾರಕ್ಕೆ ಶೂ ಪಾಲಿಷ್ ಮಾಡಿ ಹಣ ಸಂಗ್ರಹ ಮಾಡುವ ಮೂಲಕ ತಿರುಗೇಟು ನೀಡಿದೆ. ಇದೇ ಸಂದರ್ಭದಲ್ಲಿ ಜಿಲ್ಲಾಡಳಿತ ಭವನಕ್ಕೆ ಬಂದ ತಹಶೀಲ್ದಾರ್‌ ಅವರಿಗೆ ಕರವೇ ಕಾರ್ಯಕರ್ತರು ಬೂಟ್‌ ಪಾಲಿಷ್‌ ಮಾಡಿದ್ದಾರೆ. ಶೂ ಪಾಲಿಷ್‌ ಮಾಡಿಸಿಕೊಂಡ ಬಾದಾಮಿ ಮತ್ತು ಹುನಗುಂದ ತಹಶೀಲ್ದಾರ್‌ ಅವರು ಹಣ ನೀಡಿದ್ದಾರೆ.