ಸುವರ್ಣನ್ಯೂಸ್‌.ಕಾಂ ಇಂಪ್ಯಾಕ್ಟ್ | ಆಸ್ಪತ್ರೆ ಅವ್ಯವಸ್ಥೆ ವರದಿ: ಇದೀಗ ಜಿಮ್ಸ್ ಚಿತ್ರಣವೇ ಬದಲು!

ಗದಗ  ಜಿಲ್ಲಾ ಆಸ್ಪತ್ರೆಯಲ್ಲಿ‌ ಸ್ಟ್ರೆಚರ್ ಇಲ್ಲದೇ ರೋಗಿಗಳು ಪರದಾಡುವ ಪರಿಸ್ಥಿತಿ ಸಾಮಾನ್ಯವಾಗಿತ್ತು.. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ವೆಬ್‌ನಲ್ಲಿ ದೃಶ್ಯ ಸಮೇತ ಸುದ್ದಿ ಪ್ರಸಾರ ಮಾಡಿತ್ತು. 

First Published Oct 8, 2021, 6:04 PM IST | Last Updated Oct 8, 2021, 6:07 PM IST

ಗದಗ (ಅ. 08): ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ‌ ಸ್ಟ್ರೆಚರ್ ಇಲ್ಲದೇ ರೋಗಿಗಳು ಪರದಾಡುವ ಪರಿಸ್ಥಿತಿ ಸಾಮಾನ್ಯವಾಗಿತ್ತು.. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ವೆಬ್‌ನಲ್ಲಿ ದೃಶ್ಯ ಸಮೇತ ಸುದ್ದಿ ಪ್ರಸಾರ ಮಾಡಿತ್ತು. 

ಪ್ರವಾಸಿಗರ ಸಂಖ್ಯೆ ಕುಸಿತ: ಹಂಗಾಮಿ ಕಾವಾಡಿಗಳಿಗೆ 5 ತಿಂಗಳಿನಿಂದ ಸಂಬಳವಿಲ್ಲ!

ನೆಲ ಮಹಡಿ ಹಾಗೂ ತುರ್ತು ಚಿಕಿತ್ಸಾ ಘಟಕದ ಎಂಟ್ರಿಗೆ ಸ್ಟ್ರೆಚರ್ ಹಾಗೂ ವ್ಹೀಲ್ ಚೇರ್ ಇರಲಿಲ್ಲ. ಸಿಬ್ಬಂದಿ ಇಲ್ಲದೇ ಸಂಬಂಧಿಕರೇ ರೋಗಿಗಳನ್ನ ಹೊತ್ತು ವಾರ್ಡ್ ಗೆ ಶಿಫ್ಟ್ ಮಾಡುವ ಪರಿಸ್ಥಿತಿ ಇತ್ತು. ಆದ್ರೆ ಈಗ ಚಿತ್ರಣವೇ ಬದಲಾಗಿದೆ. ಸುದ್ದಿಗೆ ಸ್ಪಂದಿಸಿರೋ ಜಿಮ್ಸ್ ನಿರ್ದೇಶಕ ಪಿಎಸ್ ಭೂಸರೆಡ್ಡಿ, ಪ್ರತಿ ಮಹಡಿಗೆ ಹೆಚ್ಚುವರಿ 10 ಜನರನ್ನ ಸ್ಟ್ರೆಚರ್ ಹಾಗೂ ವ್ಹೀಲ್ ಚೇರ್ ನಿರ್ವಹಣೆಗೆ ನಿಯೋಜನೆ ಮಾಡಿದ್ದಾರೆ. ಇದು ಏಷ್ಯಾನೆಟ್ ಸುವರ್ಣ ನ್ಯೂಸ್‌ ವೆಬ್‌ ಇಂಪ್ಯಾಕ್ಟ್..!