ಪ್ರವಾಸಿಗರ ಸಂಖ್ಯೆ ಕುಸಿತ: ಹಂಗಾಮಿ ಕಾವಾಡಿಗಳಿಗೆ 5 ತಿಂಗಳಿನಿಂದ ಸಂಬಳವಿಲ್ಲ !
- ಕೊರೋನಾ ಮಹಾಮಾರಿ ಕಾಟಕ್ಕೆ ನಲುಗಿದ ಶಿವಮೊಗ್ಗದ ಸಕ್ರೆಬೈಲಿನ ಆನೆ ಬಿಡಾರ
- ಕೊರೋನಾ ನಿಯಮಗಳ ಪಾಲನೆಯ ಕಾರಣ ಕುಸಿತ ಕಂಡ ಪ್ರವಾಸಿಗರ ಸಂಖ್ಯೆ
- ಆನೆಗಳ ಕೆಲಸ ಮಾಡುವ ಹಂಗಾಮಿ ಕಾವಾಡಿಗಳಿಗೆ 5 ತಿಂಗಳಿನಿಂದ ಸಂಬಳವಿಲ್ಲ
ಶಿವಮೊಗ್ಗ (ಅ. 08): ಕೊರೊನಾ ಮಹಾಮಾರಿ ಕಾಟಕ್ಕೆ ಸಕ್ರೆಬೈಲಿನ ಆನೆ ಬಿಡಾರ ನಲುಗಿದೆ. ಕೊರೊನಾ ನಿಯಮಗಳ ಪಾಲನೆಯ ಕಾರಣ ಪ್ರವಾಸಿಗರ ಸಂಖ್ಯೆ ಕುಸಿತ ಕಂಡ ಪರಿಣಾಮ ಅನೆಗಳ ಕೆಲಸ ಮಾಡುವ ಹಂಗಾಮಿ ಕಾವಾಡಿಗಳೇ ಸಂಬಳವೇ ಅಗುತ್ತಿಲ್ಲ.
ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಆನೆ ಬಿಡಾರಕ್ಕೆ ಭೇಟಿ ನೀಡುವ ಪ್ರವಾಸಿಗರು ಕಡಿಮೆಯಾದ ಹಿನ್ನೆಲೆಯಲ್ಲಿ ಬಿಡಾರದ ಟಿಕೇಟ್ ನಿಂದ ಬರುತ್ತಿದ್ದ ಆದಾಯ ಕೂಡ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಬಂದ ಲಾಭದಲ್ಲಿ ಪಿಸಿಪಿ ನೌಕರರಿಗೆ ಸಂಬಳ ಕೊಡಬಹುದು ಎಂದು ಅರಣ್ಯಾಧಿಕಾರಿಗಳು ಆರ್ಥಿಕ ಸಂಕಷ್ಟ ಹೇಳಿಕೊಳ್ಳುತ್ತಿದ್ದಾರೆ. ಕಳೆದ 5 ತಿಂಗಳಿನಿಂದ ಸಂಬಳವಿಲ್ಲದ ಬಗ್ಗೆ ಎಲ್ಲಿ ಕಷ್ಟ ಹೇಳಿಕೊಂಡರೆ ತಮ್ಮ ಕೆಲಸ ಹೋಗುತ್ತದೋ ಎಂದು ಮೌನಕ್ಕೆ ಜಾರಿದ್ದಾರೆ. ಸಕ್ರೆಬೈಲು ಆನೆ ಬಿಡಾರದ ಕಾವಾಡಿಗಳ ಜೀವನ ನಿರ್ವಹಣೆಗೆ ಕಾಲಕಾಲಕ್ಕೆ ಸಂಬಳವಾಗ ಬೇಕಿದೆ.