ಕಾರವಾರ: ನಿಯಮಬಾಹಿರ ಗಣಿಗಾರಿಕೆ, ಮನೆಗಳಲ್ಲಿ ಬಿರುಕು,ಕಂಗಾಲಾದ ಜನತೆ

ಅವ್ಯಾಹತವಾಗಿ ನಡೆಯುತ್ತಿರುವ ನಿಯಮಬಾಹಿರ ಗಣಿಗಾರಿಕೆ| ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ‌ ತಾಲೂಕಿನ ರಾಮನಗರದಲ್ಲಿ ನಡೆಯುತ್ತಿರುವ ಗಣಿಗಾರಿಕೆ| ಭಯದಲ್ಲೇ ಜೀವನ ಸಾಗಿಸುತ್ತಿರುವ ಜನತೆ|  

First Published Mar 18, 2021, 3:31 PM IST | Last Updated Mar 18, 2021, 3:31 PM IST

ಜೊಯಿಡಾ(ಮಾ.18):ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ‌ ತಾಲೂಕಿನ ರಾಮನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲಿನಕೋರೆ ಇಲ್ಲಿನ ಜನರಿಗೆ ಶಾಪವಾಗಿ ಪರಿಣಮಿಸಿದೆ. ಇಲ್ಲಿ ಅನುಮತಿ ಪಡೆದ ಸ್ಥಳಕ್ಕಿಂತ ಹೆಚ್ಚಿ‌ನ ವ್ಯಾಪ್ತಿಯಲ್ಲಿ ಕಲ್ಲಿನ ಗಣಿಗಾರಿಕೆ ನಡೆಯುತ್ತಿರುವುದು ಒಂದೆಡೆಯಾದ್ರೆ, ಮತ್ತೊಂದೆಡೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವ ಬ್ಲಾಸ್ಟಿಂಗ್ ಕಾರ್ಯ.

ವಿಷ ಸರ್ಪದೊಂದಿಗೆ ಆಟ : ಕಣ್ಣಿಗೆ ಕಚ್ಚಿದ ಹಾವು

ಅವ್ಯಾಹತವಾಗಿ ನಡೆಯುತ್ತಿರುವ ಬ್ಲಾಸ್ಟಿಂಗ್‌ನಿಂದಾಗಿ ಸ್ಥಳೀಯರ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಮನೆಗಳು ಕುಸಿಯುವ ಭೀತಿಯಲ್ಲಿವೆ. ಇದರಿಂದ ಜನರು ಭಯದಲ್ಲೇ ಜೀವನ ಸಾಗಿಸುಂತ ಸ್ಥಿತಿ ನಿರ್ಮಾಣವಾಗಿದೆ.  ಏಷಿಯಾನೆಟ್ ಸುವರ್ಣ ನ್ಯೂಸ್ ಈ ಹಿಂದೆಯೇ ಅಧಿಕಾರಿಗಳನ್ನು ಎಚ್ಚೆತ್ತುಕೊಳ್ಳುಲು ಪ್ರಯತ್ನ ಪಟ್ಟರೂ ಕೂಡ ಅಧಿಕಾರಿಗಳು ಮಾತ್ರ ಸಮಸ್ಯೆಯನ್ನ ಪರಿಸುವ ಕಾರ್ಯವನ್ನ ಮಾಡಿಲ್ಲ.