'ಬಿಲ್ ಕಟ್ಟಿ, ಇಲ್ಲಾ ಪವರ್ ಕಟ್ ಮಾಡ್ತೀವಿ; ಆರ್‌ಟಿಒ ಕಚೇರಿಗೆ ಪವರ್ ಕಟ್ ಬಿಸಿ.!

ವಿವಿಧ ಇಲಾಖೆಗಳು ಬಾಕಿಯಿರಿಸಿರುವ ಭಾರೀ ಬಿಲ್‌ನಿಂದಾಗಿ ಹೆಸ್ಕಾಂ ಭಾರೀ ನಷ್ಟ ಎದುರಿಸುತ್ತಿದೆ. ಜನಸಾಮಾನ್ಯರಿಗೆ ಮಾತ್ರವಲ್ಲ, ಸರ್ಕಾರಿ ಕಚೇರಿಗೂ ಪವರ್ ಕಟ್ ಬಿಸಿ ಮುಟ್ಟಿದೆ. 
 

First Published Jan 8, 2021, 11:20 AM IST | Last Updated Jan 8, 2021, 11:20 AM IST

ಕಾರವಾರ (ಜ. 08): ವಿವಿಧ ಇಲಾಖೆಗಳು ಬಾಕಿಯಿರಿಸಿರುವ ಭಾರೀ ಬಿಲ್‌ನಿಂದಾಗಿ ಹೆಸ್ಕಾಂ ಭಾರೀ ನಷ್ಟ ಎದುರಿಸುತ್ತಿದೆ. ಈ ಕಾರಣದಿಂದ ಹಣ ಬಾಕಿಯಿರಿಸಿರುವ ಸರಕಾರಿ ಇಲಾಖೆಗಳಿಗೆ ಬುದ್ಧಿ ಕಲಿಸಲು ಹೊರಟಿರುವ ಹೆಸ್ಕಾಂ ಸರಕಾರಿ ಕಚೇರಿಗಳ ಪವರ್ ಲೈನ್ ಕಟ್ ಮಾಡತೊಡಗಿದೆ. ಜನಸಾಮಾನ್ಯರಿಗೆ ಮಾತ್ರವಲ್ಲ, ಸರ್ಕಾರಿ ಕಚೇರಿಗೂ ಪವರ್ ಕಟ್ ಬಿಸಿ ಮುಟ್ಟಿದೆ. 

'ಅಕೆಶಿಯ ಪ್ಲಾಂಟೇಷನ್ ನಮ್ಮೂರಿಗೆ ಬೇಡ' ಶಿವಮೊಗ್ಗದಲ್ಲಿ ಪ್ರತಿಭಟನೆ

ಕಳೆದ 3-4 ತಿಂಗಳಿಂದ ಬಿಲ್ ಪಾವತಿಸದಿದ್ದ ಕಾರವಾರ ಆರ್‌ಟಿಒ ಕಚೇರಿಗೆ ಶಾಕ್ ನೀಡಿರುವ ಹೆಸ್ಕಾಂ ಒಂದೋ ಬಿಲ್ ಪಾವತಿಸಲು ಇಲ್ಲವೇ ಮನವಿ ಪತ್ರ ಸಲ್ಲಿಸುವ ಅನಿವಾರ್ಯತೆ ಮುಂದಿರಿಸಿದೆ.