ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗೆ ಎಚ್ಚೆತ್ತ ಸರ್ಕಾರ: ನೇಕಾರರ ‘ಪವರ್’ ಸಮಸ್ಯೆಗೆ ಕೊನೆಗೂ ಸಿಕ್ತು ಪರಿಹಾರ
ಗ್ಯಾರಂಟಿ ಭರವಸೆಗಳ ಮೂಲಕವೇ ಚುನಾವಣೆ ಗೆದ್ದ ಕಾಂಗ್ರೆಸ್ ಆ ಒಂದು ವರ್ಗಕ್ಕೂ ಒಂದು ಭರವಸೆ ನೀಡಿತ್ತು. ಆದ್ರೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ರು ಆದ್ರೆ ಆ ವರ್ಗಕ್ಕೆ ಕೊಟ್ಟ ಮಾತನ್ನು ಮರೆತು ಬಿಟ್ಟಿತ್ತು. ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡ್ತಿದ್ದಂತೆ ಎಚ್ಚೆತ್ತ ಸರ್ಕಾರ ಭರವಸೆ ಈಡೇರಿಸಿದೆ.
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಗೃಹ ಜ್ಯೋತಿ ಗ್ಯಾರಂಟಿ ಮಾದರಿಯಲ್ಲಿ ನೇಕಾರರ ಮಗ್ಗಗಳಿಗೆ 20 ಎಚ್.ಪಿ ವರೆಗೆ ಉಚಿತ ವಿದ್ಯುತ್(Current) ಪೂರೈಸೋದಾಗಿ ಭರವಸೆ ನೀಡಿದ್ರು.. ಆದ್ರೆ, ಭರವಸೆ ಭರವಸೆಯಾಗೇ ಉಳಿದಿತ್ತು. ಯೋಜನೆ ಜಾರಿಯಾಗದ ಹಿನ್ನೆಲೆ ಗದಗ(Gadag) ಬೆಟಗೇರಿ ನೇಕಾರರು ಬಿಲ್ ಪಾವತಿಸದಿರಲು ನಿರ್ಧರಿಸಿ ಹೋರಾಟ ನಡೆಸಿದ್ರು. ನೇಕಾರರ ಸಮಸ್ಯೆಗೆ ಧ್ವನಿಯಾಗಿ ನಿಂತಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್ ವಿಸೃತ ವರದಿ ಪ್ರಸಾರ ಮಾಡಿತ್ತು. ಸುವರ್ಣ ನ್ಯೂಸ್ ವರದಿ ಬೆನ್ನಲ್ಲೆ ಎಚ್ಚೆತ್ತ ಸರ್ಕಾರ ಬಡ ನೇಕಾರರ ಮಗ್ಗಗಳಿಗೆ 10 ಎಚ್ ಪಿ ವರೆಗೆ ಉಚಿತ ವಿದ್ಯುತ್ ಪೂರೈಸೋದಕ್ಕೆ ಅಸ್ತು ಎಂದಿದೆ. ಈ ಆದೇಶ ಪ್ರತಿ ನೇಕಾರರ(Weavers) ಕೈಗೆ ಸಿಗ್ತಿದ್ದಂತೆ ಸಿಹಿ ಹಂಚಿ ಸಂಭ್ರಮಿಸಿದ್ರು. ಈ ಹಿಂದೆಯೂ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದ ಆಧೀನದಲ್ಲಿ ಕೆಲಸ ಮಾಡಿದ್ದ ಕೈ ಮಗ್ಗದ ನೇಕಾರರಿಂದ, ಪಿಎಫ್ ಮಾದರಿಯಲ್ಲಿ ಹಣ ಜಮೆ ಮಾಡಿಸಿಕೊಳ್ಳಲಾಗಿತ್ತು.. ಆದ್ರೆ ಯಾರೊಬ್ಬರಿಗೂ ಆ ಹಣ ಸೇರಿರಲಿಲ್ಲ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ 2022 ರ ಆಗಸ್ಟ್ 9 ರಂದು ವರದಿ ಪ್ರಸಾರ ಮಾಡಿತ್ತು.. ನಮ್ಮ ವರದಿ ಬೆನ್ನಲ್ಲೇ 12 ಸಾವಿರಕ್ಕೂ ಹೆಚ್ಚು ನೇಕಾರರಿಗೆ ಹಣ ತಲುಪಿತ್ತು. ಧ್ವನಿ ಇಲ್ಲದ ನೇಕಾರರಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಹಿಂದಿನಿಂದಲೂ ಧ್ವನಿಯಾಗ್ತಾ ಬಂದಿದೆ.. ಸರ್ಕಾರ, ಭರವಸೆ ಕೊಟ್ಟು ಮರೆತಿದ್ದ ಯೋಜನೆ ಜಾರಿ ಮಾಡಿದೆ.. ಸುವರ್ಣ ನ್ಯೂಸ್ ಧ್ವನಿ ಇಲ್ಲದವರ ಧ್ವನಿಯಾಗಿ ಜನಪರ ಕೆಲಸಕ್ಕೆ ವ್ಯಾಪಕ ಪ್ರಶಂಸೆಯೂ ವ್ಯಕ್ತವಾಗಿದೆ. ಸಂಕಷ್ಟದಲ್ಲಿರುವವರ ಪರ ಧ್ವನಿ ಎತ್ತುವ ಸುವರ್ಣ ನ್ಯೂಸ್ಗೆ ನೇಕಾರರು ಧನ್ಯವಾದ ತಿಳಿಸಿದ್ರು.
ಇದನ್ನೂ ವೀಕ್ಷಿಸಿ: ಒಂದೆಡೆ ಬರ, ಮತ್ತೊಂದೆಡೆ ಲೋಡ್ ಶೆಡ್ಡಿಂಗ್: ಬೆಳೆದ ಆಲೂಗಡ್ಡೆ ಬೆಳೆಯಲ್ಲಿ ಫಸಲೇ ಮಾಯ..!